ಪ್ರಜಾಸ್ತ್ರ ಸುದ್ದಿ
ದಾವಣಗೆರೆ(Davanagere): ನಮ್ಮ ಜನಪ್ರತಿನಿಧಿಗಳ ಕಾರ್ಯವೈಖರಿ, ಅಧಿಕಾರಿಗಳ ಆಡಳಿತ ವ್ಯವಸ್ಥೆ ಎಷ್ಟೊಂದು ಹೆದಗೆಟ್ಟಿದೆ ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಅವುಗಳ ಸಾಲಿಗೆ ಮಳೆಗಾಲ ಬಂದರೆ ಮತ್ತಷ್ಟು ಸೇರ್ಪಡೆಯಾಗುತ್ತವೆ. ಕಳೆದ ರಾತ್ರಿ ಸುರಿದ ಮಳೆಗೆ(Rain) ದಾವಣಗೆರೆ ಜಿಲ್ಲೆಯ ಹೊನ್ನಳ್ಳಿ ತಾಲೂಕಿನ ಸಾರ್ವಜನಿಕ(Honnalli Government Hospital) ಆಸ್ಪತ್ರೆ ಜಲಾವೃತಗೊಂಡಿದೆ. ಐಸಿಯು, ಸಾಮಾನ್ಯ ವಾರ್ಡ್ ಸೇರಿದಂತೆ ಎಲ್ಲೆಡೆ ನೀರು ನುಗ್ಗಿದೆ. ಇದರ ಪರಿಣಾಮ ರೋಗಿಗಳು, ಅವರ ಸಂಬಂಧಿಕರು, ಸಿಬ್ಬಂದಿ ಪರದಾಡಿದರು. ಈ ಅವ್ಯವಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಳೆದ ರಾತ್ರಿ ತಾಲೂಕಿನಲ್ಲಿ ಭರ್ಜರಿ ಮಳೆಯಾಗಿದೆ. ಹೀಗಾಗಿ ಮಳೆ ನೀರುವ ಆಸ್ಪತ್ರೆಗೆ ನುಗ್ಗಿದೆ. ಸಾಮಾನ್ಯ ವಾರ್ಡ್, ಹೆರಿಗೆ ವಾರ್ಡ್, ಆಪರೇಷನ್ ಕೊಠಡಿ, ಬಾಣಂತಿಯರ ರೂಮ್, ಔಷಧಿ ವಿತರಣಾ ವಿಭಾಗ ಸೇರಿದಂತೆ ಎಲ್ಲೆಂದರಲ್ಲಿ ಮಳೆ ನೀರು ನುಗ್ಗಿದೆ. ಹೀಗಾಗಿ ರಾತ್ರಿಪೂರ್ತಿ ಇಲ್ಲಿದ್ದ ಪ್ರತಿಯೊಬ್ಬರು ಹೈರಾಣಾದರು. ಈ ಏರಿಯಾದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ್ದಕ್ಕೆ ಕ್ರೀಡಾಂಗಣದಿಂದ ಮಳೆನೀರು ಆಸ್ಪತ್ರೆಗೆ ನುಗ್ಗಿದೆಯಂತೆ. ಇಂತಹ ವ್ಯವಸ್ಥೆಯಲ್ಲಿ ನಮ್ಮ ದೇಶ ಇಂದಿಗೂ ಸಿಕ್ಕು ಒದ್ದಾಡುತ್ತಿದೆ