ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಪ್ರಸಿದ್ಧ ರಾಜಾ ರವಿ ವರ್ಮಾ ರಚಿಸಿರುವ ಯಶೋಧಾ ಹಾಗೂ ಕೃಷ್ಣನ ತೈಲಚಿತ್ರ ಬರೋಬ್ಬರಿ 167 ಕೋಟಿ ರೂಪಾಯಿ ಹರಾಜು ಆಗಿದೆ. ಮುಂಬೈನಲ್ಲಿ ಬುಧವಾರ ನಡೆದ ಸ್ಯಾಫ್ರನ್ ಆರ್ಟ್ ಹರಾಜಿನಲ್ಲಿ ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಸಂಸ್ಥಾಪಕ ಸೈರಸ್ ಪೂನಾವಾಲ ಇದನ್ನು ಖರೀದಿಸಿದರು.
1890ರಲ್ಲಿ ರಾಜಾ ರವಿ ವರ್ಮಾ ಇದನ್ನು ರಚಿಸಿದ್ದಾರೆ. ತಾಯಿ ಯಶೋಧಾ ಹಾಲು ಕರಿಯುವಾಗ ಬಾಲಕೃಷ್ಣ ಹಿಂದಿನಿಂದ ಬಂದು ಲೋಟ ಹಿಡಿದಿರುವ ತೈಲವರ್ಣದ ಚಿತ್ರವಿದು. ರವಿ ವರ್ಮಾ ಅವರ ಕಲಾಕೃತಿಗಳು ರಾಷ್ಟ್ರೀಯ ಸಂಪತ್ತು ಎಂದು ವರ್ಗಿಕರಿಸಲಾಗಿದೆ. ಹೀಗಾಗಿ ಭಾರತದಿಂದ ಹೊರಗೆ ಒಯ್ಯಲು ಅವಕಾಶವಿಲ್ಲ. ಕಾಲಕಾಲಕ್ಕೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುವಂತೆ ಮಾಡುವುದು ನನ್ನ ಗುರಿ ಎಂದು ಸೈರಸ್ ಪೂನಾವಾಲ ಹೇಳಿದ್ದಾರೆ.
ಹೋದ ವರ್ಷ ಎಂ.ಎಫ್ ಹುಸೇನ್ ಅವರ ಅನ್ ಟೈಟಲ್ಡ್ ಚಿತ್ರ 118 ಕೋಟಿಗೆ ಹರಾಜು ಆಗಿತ್ತು. ದೆಹಲಿ ಮೂಲದ ಕಿರಣ್ ನಾಡರ್ ಖರೀದಿಸಿದ್ದು, ದಾಖಲೆ ನಿರ್ಮಿಸಿತ್ತು. ಇದೀಗ ರವಿ ವರ್ಮನ ಕಲಾಕೃತಿ ಇದನ್ನು ಮೀರಿದೆ.




