ಪ್ರಜಾಸ್ತ್ರ ಸುದ್ದಿ
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ಈಗ ಕೂಲಿ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದ ಶೂಟಿಂಗ್ ಜೋರಾಗಿದೆ. ಈ ಚಿತ್ರದಲ್ಲಿ ಮಲ್ಟಿ ಸ್ಟಾರ್ ನಟರುಗಳಿದ್ದಾರೆ. ಇದರೊಂದು ಗೋಲ್ಡ್ ಸ್ಮಗ್ಲಿಂಗ್ ಕಥೆಯನ್ನು ಹೊಂದಿರುವ ಸಿನಿಮಾವೆಂದು ಹೇಳಲಾಗುತ್ತಿದೆ. ಇದರಲ್ಲಿ ಬೇರೆ ಬೇರೆ ಭಾಷೆಗಳ ಸ್ಟಾರ್ ನಟರಿದ್ದಾರೆ. ಅದರಲ್ಲಿ ಬಾಲಿವುಡ್ ಫರ್ಫೆಕ್ಟ್ ಆಮೀರ್ ಖಾನ್ ಸಹ ಒಬ್ಬರು.
ಕೂಲಿ ಸಿನಿಮಾದಲ್ಲಿ ಆಮೀರ್ ಖಾನ್ ಸಹ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ. 1995ರಲ್ಲಿ ಹಿಂದಿಯಲ್ಲಿ ಆತಾಂಕ್ ಹಿ ಆತಾಂಕ್ ಚಿತ್ರದಲ್ಲಿ ಆಮೀರ್, ರಜಿನಿ ಒಟ್ಟಿಗೆ ನಟ್ಟಿಸಿದ್ದರು. ಅದಾದ ಬಳಿಕ ಬೇರೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಈಗ ಕೂಲಿ ಸಿನಿಮಾದಲ್ಲಿ ಜೊತೆಯಾಗುತ್ತಿದ್ದಾರೆ. ತೆಲುಗಿನಿಂದ ಅಕ್ಕಿನೇನಿ ನಾನಾರ್ಜುನ್, ಕನ್ನಡದಿಂದ ಉಪೇಂದ್ರ, ನಟಿ ಶ್ರುತಿ ಹಾಸನ್ ಸೇರಿದಂತೆ ಇತರರು ಕಾಣಿಸಿಕೊಳ್ಳುತ್ತಿದ್ದಾರೆ.