Ad imageAd image

ರಾಜ್ಯಸಭಾ ಚುನಾವಣೆ: ಒಡಿಶಾ ಶಾಸಕರು ಬಿಡದಿಯ ರೆಸಾರ್ಟ್ ಗೆ

Nagesh Talawar
ರಾಜ್ಯಸಭಾ ಚುನಾವಣೆ: ಒಡಿಶಾ ಶಾಸಕರು ಬಿಡದಿಯ ರೆಸಾರ್ಟ್ ಗೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬಿಡದಿ(Bidadi): ಒಡಿಶಾ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಆತಂಕದಿಂದ ಕಾಂಗ್ರೆಸ್ ಶಾಸಕರನ್ನು ರಾಮನಗರ ಬಿಡದಿ ಹತ್ತಿರ ಇರುವ ವಂಡರ್ ಲಾ ರೆಸಾರ್ಟ್ ಗೆ ಕರೆದುಕೊಂಡು ಬರಲಾಗಿದೆ. ಗುರುವಾರ ರಾತ್ರಿ 11 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದಿ, ಅಲ್ಲಿಂದ ರೆಸಾರ್ಟ್ ಗೆ ಕರೆದುಕೊಂಡು ಹೋಗಲಾಗಿದೆ. ಇದರ ಉಸ್ತುವಾರಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗೆ ವಹಿಸಲಾಗಿದೆ.

ಪೊಲೀಸ್ ಬಂದೋಬಸ್ತಿ, ಎಸ್ಕಾರ್ಟ್ ಮೂಲಕ ಶಾಸಕರನ್ನು ರೆಸಾರ್ಟ್ ಗೆ ಕರೆದುಕೊಂಡು ಹೋಗಲಾಗಿದೆ. ಶಾಸಕರಾದ ಅಶೋಕ್ ಕುಮಾರ್, ಅಪ್ಪಲ್ ಸ್ವಾಮಿ, ಮಂಗು ಖಿಲಾ, ರಾಜನ್ ಎಕ್ಕಾ, ಕಾಂಗ್ರೆಸ್ ವಕ್ತಾರ ದುರ್ಗ ಪ್ರಸಾದ್ ಪಾಂಡಾ, ಮಾಜಿ ಸಂಸದ ಭಕ್ತ ಚರಣ್ ದಾಸ್ ಸೇರಿದಂತೆ 14 ಜನರಿದ್ದಾರೆ. 147 ಸದಸ್ಯ ಬಲವನ್ನು ಒಡಿಶಾ ವಿಧಾನಸಭೆ ಹೊಂದಿದೆ. ಇದರಲ್ಲಿ 79 ಬಿಜೆಪಿ, 50 ಬಿಜೆಡಿ, 14 ಕಾಂಗ್ರೆಸ್ ಶಾಸಕರಿದ್ದಾರೆ.

WhatsApp Group Join Now
Telegram Group Join Now
Share This Article