Ad imageAd image

ಸಿಂದಗಿ: ಹಿರಿಯ ಮಕ್ಕಳ ಸಾಹಿತಿ ಹ.ಮ ಪೂಜಾರಗೆ ರಾಜ್ಯೋತ್ಸವ ಪ್ರಶಸ್ತಿ

2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಗುರುವಾರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದೆ.

Nagesh Talawar
ಸಿಂದಗಿ: ಹಿರಿಯ ಮಕ್ಕಳ ಸಾಹಿತಿ ಹ.ಮ ಪೂಜಾರಗೆ ರಾಜ್ಯೋತ್ಸವ ಪ್ರಶಸ್ತಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಗುರುವಾರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದೆ. 70 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಾಹಿತ್ಯ ವಲಯದಿಂದ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಹಿರಿಯ ಮಕ್ಕಳ ಸಾಹಿತಿ ಹ.ಮ ಪೂಜಾರ ಅವರನ್ನು ಆಯ್ಕೆ ಮಾಡಲಾಗಿದೆ. 12 ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ನೀಡಲಾಗಿದೆ. ಈ ಬಾರಿ ಯಾವುದೇ ಸಂಘ, ಸಂಸ್ಥೆಗಳನ್ನು ಪ್ರಶಸ್ತಿಯನ್ನು ನೀಡಿಲ್ಲ.

ಹ.ಮ ಪೂಜಾರ ಅವರ ಪರಿಚಯ: ಹನುಮಂತ್ರಾಯ ಮನ್ನಪ್ಪ ಪೂಜಾರ ಇವರ ಪೂರ್ತಿ ಹೆಸರು. ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ಮಾರ್ಚ್ 13, 1943ರಂದು ಜನಿಸಿದರು. ಬಿ.ಎ ಬಿಈಡಿ ವರೆಗೆ ಶಿಕ್ಷಣ ಪಡೆದಿದ್ದು, 1961ರಿಂದ 1993ರ ತನಕ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಹಾಗೂ ರಾಷ್ಟ್ರೀಯ ಆದರ್ಶ ಶಿಕ್ಷ ಪ್ರಶಸ್ತಿ ಪಡೆದಿದ್ದಾರೆ. ಇದರ ಜೊತೆಗೆ ಮಕ್ಕಳ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದು, ಹಲವಾರ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.

ಸಾಹಿತ್ಯ ಕೃಷಿ: ನೀತಿಯ ಬದುಕು, ಪರೋಪಕಾರ, ತುಂಟ ಮಂಗ, ಯಾರು ಜಾಣರು ಅನ್ನೋ ಮಕ್ಕಳ ಕಥಾ ಸಂಕಲನ ರಚಿಸಿದ್ದಾರೆ. ಪರಿಸರ, ಗುಬ್ಬಚ್ಚಿ ಮಕ್ಕಳ ಕವನ ಸಂಕಲನ, ಚಿಣ್ಣರ ಚೇತನ ಅನ್ನೋ ಮಕ್ಕಳ ಕಾದಂಬರಿ, ಗೋಲಗೇರಿ ಗೊಲ್ಲಾಳೇಶ್ವರ(ಚರಿತ್ರೆ), ನಮಸ್ಕಾರ ಪುನಃ ಬನ್ನಿ(ನಗೆ ಹನಿಗಳು), ರಸಕಿರಣ ( ಶೈಕ್ಷಣಿಕ ಸಮ್ಮೇಳನದ ಸಂಸ್ಮರಣ ಗ್ರಂಥ ), ವಿಜಯವಾಣಿ ( ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಂಸ್ಮರಣ ಗ್ರಂಥ ), ಚಿಣ್ಣರ ಚೇತನ ( ಜಿಲ್ಲಾ ಮಕ್ಕಳ ಸಾಹಿತ್ಯ ಸಮೀಕ್ಷೆ),        ಪಂಚಾಕ್ಷರಿ ಪ್ರಭೆ ( ಸಂಗೀತ ಕಲೆ ಕುರಿತು ಲೇಖನಗಳ ಸಂಕಲನ), ಪುಟ್ಟಕಾಣಿಕೆ ( ಮಕ್ಕಳ ಕಥಾ ಸಂಕಲನ), ಸುವರ್ಣ ಸಂಭ್ರಮ (ಮಕ್ಕಳ ಕವನ ಸಂಕಲನ ), ಮಕ್ಕಳ ಸಾಹಿತ್ಯ ಚಿಂತನ (ಮಕ್ಕಳ ಸಾಹಿತ್ಯ ಸಮೀಕ್ಷೆ) ಸಂಪಾದಿತ ಕೃತಿಗಳು. ನಾಡಿನ ಹಲವು ಪ್ರಮುಖ ಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಕಥೆ, ಕವನ, ಲೇಖನ ಪ್ರಕಟಗೊಂಡಿವೆ.

ಪ್ರಶಸ್ತಿ-ಪುರಸ್ಕಾರ: ಬೋರಗಿ-ಪುರದಾಳದಲ್ಲಿ 2013ರಲ್ಲಿ ನಡೆದ ಮೊದಲ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. 1998ರಲ್ಲಿ ಕರ್ನಾಟಕ ಸರ್ಕಾರದಿಂದ ಆದರ್ಶ ಶಿಕ್ಷಕ ಪ್ರಶಸ್ತಿ, 2000ರಲ್ಲಿ ಭಾರತ ಸರ್ಕಾರದಿಂದ ಆದರ್ಶ ಶಿಕ್ಷಕಿ ಪ್ರಶಸ್ತಿ, 2014ರಲ್ಲಿ ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕ ಪ್ರಶಸ್ತಿ, 2014ರಲ್ಲಿ ಬಾಲ ವಿಕಾಸ ಅಕಾಡಮಿಯ ಗೌರವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಇವರ ಮುಡಿಗೇರಿವೆ. ಇದೀಗ 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿದ್ದು, ಅವರ ಅಭಿಮಾನಿಗಳು, ಶಿಷ್ಯರು, ಹಿತೈಷಿಗಳು ಹಾಗೂ ತಾಲೂಕಿನ ಜನತೆ ಅಭಿನಂದನೆಗಳು ಸಲ್ಲಿಸಿದ್ದಾರೆ.

WhatsApp Group Join Now
Telegram Group Join Now
Share This Article