ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಯೂಟ್ಯೂಬರ್ ರಣವೀರ್ ಅಲಹಾಬಾದಿಯಾನ ಎಂಬಾತನ ವಿವಾದಾತ್ಮಕ(Controversy) ಹೇಳಿಕೆ ಸಂಬಂಧ ಮಾತನಾಡಲು ಹೋಗಿ ನಟಿ ರಾಖಿ ಸಾವಂತ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಮೊದಲು ಭಾರತದಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣಗಳನ್ನು ತಿಖೆ ಮಾಡಿ ಮುಗಿಸ್ರಪ್ಪಾ ಎಂದು ಪೊಲೀಸರಿಗೆ ಲೇವಡಿ ಮಾಡಿದ್ದಾರೆ. ಈ ಸಂಬಂಧ ನಟಿಗೆ ಪೊಲೀಸರು ನೋಟಿಸ್ ಕೊಟ್ಟಿದ್ದು, ವಿಚಾರಣೆಗೆ ಕರೆದಿದ್ದಾರೆ.
ರಣವೀರ್, ಸಮಯ್ ರೈನಾ ಅವರ ಯುಟ್ಯೂಬ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ವೇಳೆ ಪೋಷಕರು ಹಾಗೂ ಲೈಂಗಿಕತೆ ಬಗ್ಗೆ ಕೇಳಿದ್ದು ವಿವಾದವಾಗಿದೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿದ್ದಾರೆ. ಈ ವಿವಾದಾತ್ಮಕ ಶೋ ಬಗ್ಗೆ ಮಾತನಾಡಲು ಹೋದ ನಟಿ ರಾಖಿ ಸಾವಂತ್ ಪೊಲೀಸರ ವಿರುದ್ಧ ವ್ಯಂಗ್ಯ ಮಾಡಿದ್ದಾರೆ. ಅದು ಆಕೆಗೆ ಮುಳುವಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.