ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ವಿಧಾನ ಪರಿಷತ್ ನಾಲ್ಕು ಸ್ಥಾನಗಳು ಕಳೆದ 7 ತಿಂಗಳಿನಿಂದ ಖಾಲಿ ಉಳಿದಿದ್ದವು. ಅವುಗಳಿಗೆ ಕಾಂಗ್ರೆಸ್ ನ ನಾಲ್ವರು ಮುಖಂಡರನ್ನು ನೇಮಕ ಮಾಡಲಾಗಿದೆ. ಭಾನುವಾರ ರಾಜ್ಯ ಸರ್ಕಾರ ನಾಮನಿರ್ದೇಶಿತ ಸದಸ್ಯರ ಹೆಸರುಗಳನ್ನು ಪ್ರಕಟಿಸಿದೆ. ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಸಮಿತಿಯ ಅಧ್ಯಕ್ಷೆ ಆರತಿ ಕೃಷ್ಣ ಅವರನ್ನು ನೇಮಿಸಲಾಗಿದೆ.
ಇನ್ನು ಎಐಸಿಸಿ ಪರಿಶಿಷ್ಟ ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಜಕ್ಕಪ್ಪನವರ್, ಸಿಎಂ ಆಪ್ತ, ಪತ್ರಕರ್ತರಾದ ಶಿವಕುಮಾರ್ ಅವರನ್ನು ಮೇಲ್ಮನೆಗೆ ನೇಮಕ ಮಾಡಲಾಗಿದೆ. ಕಾಂಗ್ರೆಸ್ ನ ಯು.ಬಿ ವೆಂಕಟೇಶ್, ಪ್ರಕಾಶ್ ರಾಥೋಡ್, ಜೆಡಿಎಸ್ ನ ಕೆ.ಎ ತಿಪ್ಪೇಸ್ವಾಮಿ, ಉಪ ಚುನಾವಣೆ ಕಾರಣಕ್ಕೆ ಬಿಜೆಪಿಯಿಂದ ಸಿ.ಪಿ ಯೋಗೇಶ್ ಹೊರ ಬಂದು ಕಾಂಗ್ರೆಸ್ ಸೇರಿದ್ದರು. ಈ ನಾಲ್ಕು ಸ್ಥಾನಗಳಿಗೆ ಇದೀಗ ನೇಮಿಸಲಾಗಿದೆ.