ಪ್ರಜಾಸ್ತ್ರ ಸುದ್ದಿ
ಕೊಲ್ಕತ್ತಾ(Kolkata): ಆರ್.ಜಿ ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ವೈದ್ಯರು ನಡೆಸುತ್ತಿರುವ ಉಪವಾಸ(Hunger Strike) ಸತ್ಯಾಗ್ರಹ ಮುಂದುವರೆದಿದೆ. ಈ ಮೂಲಕ ಕಳೆದ 11 ದಿನಗಳಿಂದ ನಿರಂತರ ಉಪವಾಸ ನಡೆಸಲಾಗುತ್ತಿದೆ. ಹೋರಾಟ ಸಂಬಂಧ ಸೋಮವಾರ 12 ವೈದ್ಯಕೀಯ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋತ್ ಪಂತ್ ನಡೆಸಿದ ಸಭೆ ಯಾವುದೇ ಫಲ ನೀಡಿಲ್ಲ.
ಇಂದು ಸಹ ಉಪವಾಸ ಸತ್ಯಾಗ್ರಹ ಮುಂದುವರೆದಿದೆ. ನಿನ್ನೆ ರಾಜಭವನದ ತನಕ ಪ್ರತಿಭಟನೆ ರ್ಯಾಲಿ ಮಾಡಲಾಗಿದೆ. ತಮಗೆ ನ್ಯಾಯ ಸಿಗುವ ತನಕ ಹೋರಾಟ ಮುಂದುವರೆಯಲಿದೆ ಎಂದು ಹೇಳುತ್ತಿದ್ದಾರೆ. ಇಂದು ವೈದ್ಯರು ಸಮಾವೇಶ ಹಮ್ಮಿಕೊಂಡಿದ್ದಾರೆ. ಆದರೆ, ಅಕ್ಟೋಬರ್ 15ರಂದು ದುರ್ಗ ಪೂಜೆ ಮಹೋತ್ಸವ ಇರುವುದರಿಂದ ಸಮಾವೇಶ ನಡೆಸದೆ ರದ್ದುಗೊಳಿಸಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಒತ್ತಾಯಿಸಿದ್ದಾರೆ.