ಪ್ರಜಾಸ್ತ್ರ ಸುದ್ದಿ
ಮಂಗಳೂರು(Mangaloru): ಅತ್ಯಾಚಾರ ಆರೋಪದ ಹಿನ್ನಲೆಯಲ್ಲಿ ಪೇದೆಯೊಬ್ಬರನ್ನು ಬಂಧಿಸಲಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕಂಕನವಾಡಿ ಠಾಣೆ ಪೊಲೀಸರು ಆರೋಪಿ ಪೇದೆಯನ್ನು ಬಂಧಿಸಿದ್ದಾರೆ. ಚಂದ್ರನಾಯಕ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯುವತಿ ಹಾಗೂ ಆರೋಪಿ ನಡುವೆ ಪರಚಯವಾಗಿದ್ದು ಹೇಗೆ? ಎಷ್ಟು ವರ್ಷಗಳಿಂದ ಪರಿಚಯ? ಅಪರಿಚಿತರಾ? ಹೀಗೆ ಎಲ್ಲ ರೀತಿ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ತನಿಖೆಯಿಂದ ಸತ್ಯ ತಿಳಿದು ಬರಬೇಕಿದೆ.