ಪ್ರಜಾಸ್ತ್ರ ಸುದ್ದಿ
ಚನ್ನೈ(Chennai): ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವಕನನ್ನು ನಂಬಿ ಹೋದ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಬಳಕಿಗೆ ಬಂದಿದೆ. ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಈ ಘಟನೆ ನಡೆದಿದ್ದು, 7 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಉಕ್ಕಡಂ ಪೊಲೀಸ್ ಠಾಣೆಯಲ್ಲಿ ಬಾಲಕಿ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು. ಸೋಮವಾರ ಮುಂಜಾನೆ ಬಾಲಕಿ ಮನೆಗೆ ಬಂದಿದ್ದಳು. ಮಂಗಳವಾರ 7 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಆರೋಪಿಯೊಬ್ಬ ಪರಿಚಯನಾಗಿದ್ದ. ಆಕೆಯನ್ನು ತನ್ನ ಬಾಡಿಗೆ ರೂಮಿಗೆ ಕರೆದಿದ್ದಾನೆ. ಆಕೆ ಅಲ್ಲಿಗೆ ಹೋದ ಬಳಿಕ ಆತನ 6 ಸ್ನೇಹಿತರ ಜೊತೆ ಕೂಡಿಕೊಂಡು ಅತ್ಯಾಚಾರವೆಸಗಿದ್ದಾರೆ. ಈ ಸಂಬಂದ ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಾಗಿದೆ. ಬಂಧಿತರೆಲ್ಲ 19 ರಿಂದ 20 ವರ್ಷದವರಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಗೊತ್ತು ಪರಿಚಯವಿಲ್ಲದವರನ್ನು ನಂಬಿ ಹೋಗಿ ಜೀವ, ಜೀವನ ಹಾಳು ಮಾಡುಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ನಿಜಕ್ಕೂ ದುರಂತ.