ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ವೈಚಾರಿಕತೆ ಮತ್ತು ನೈತಿಕತೆ ಕನ್ನಡದ ಶಕ್ತಿ ಎಂದು ಕವಿ ಡಾ.ಸತ್ಯಮಂಗಲ ಮಹಾದೇವ ಹೇಳಿದರು. ನಗರದಲ್ಲಿರುವ ಬಿಜಿಎಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ಆಯೋಜಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಂಪನ ಹೇಳಿದ ವಿಶ್ವಮಾನವ ಪರಿಕಲ್ಪನೆ ಮತ್ತು ಪ್ರೇಮದ ನೈತಿಕತೆ ಕುವೆಂಪುರವರ ರಾಷ್ಟ್ರ ಪ್ರೇಮ ಮತ್ತು ವೈಚಾರಿಕತೆ ಕುರಿತು ಮಾತನಾಡಿದರು. ಕನ್ನಡ ಭಾಷೆಗೆ ಎರಡುವರೆ ಸಾವಿರ ವರ್ಷಗಳ ಇತಿಹಾಸವಿದೆ. ಇಂದು ನಾವು ಏಕೀಕರಣದಿಂದ ಪಡೆದುಕೊಂಡಿರುವ ರಾಜ್ಯದ ಇತಿಹಾಸ ನಮಗೆ ಮಾರ್ಗದರ್ಶನವೂ ಆಗಿರಬೇಕು. ಜೊತೆಯಲ್ಲಿ ಇಂದು ನಾವು ಎದುರಿಸುತ್ತಿರುವ ಆಧುನಿಕ ಸಮಸ್ಯೆಗಳಿಗೆ ಕನ್ನಡ ಅನ್ನದ ಭಾಷೆಯಾದಾಗ ಔಷಧಿ ಸಿಗಬಹುದು. ಎಲ್ಲರೂ ಕನ್ನಡದಲ್ಲಿ ಮಾತನಾಡುವ ದೀಕ್ಷೆಯನ್ನು ತೊಡೋಣ ಎಂದು ಹೇಳಿದರು.
ಸೌಮ್ಯನಾಥ ಸ್ವಾಮೀಜಿಯ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿಜಿಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಚರಣ್ ಕುಮಾರ್, ಬಿಜಿಎಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಜಿ.ಕೆ.ರವಿಕುಮಾರ್, ಬಿಜಿಎಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ಪ್ರಾಂಶುಪಾಲರಾದ ಮಂಜುನಾಥ್ ಹಾಗೂ ಬಿಜಿಎಸ್ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ನಾಗೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.




