ಪ್ರಜಾಸ್ತ್ರ ಸುದ್ದಿ
ಚೆನ್ನೈ(Chennai): ಐಪಿಎಲ್ ಟೂರ್ನಿಯಲ್ಲಿ ಯಾವ ಟೀಂಗಳಿಗೂ ಇರದ ಕ್ರೇಜ್ ಆರ್ ಸಿಬಿ ಹಾಗೂ ಸಿಎಸ್ಕೆ ನಡುವೆ ನಡೆಯುವ ಪಂದ್ಯಕ್ಕೆ ಇರುತ್ತೆ. ಈ ಎರಡು ತಂಡಗಳ ನಡುವಿನ ಪಂದ್ಯಕ್ಕೆ ಇಡೀ ದೇಶವೇ ಕುತೂಹಲದಿಂದ ಕಾಯುತ್ತೆ. ಶುಕ್ರವಾರ ಸಂಜೆ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 50 ರನ್ ಗಳಿಂದ ಜಯ ಸಾಧಿಸುವ ಮೂಲಕ 17 ವರ್ಷಗಳ ಬಳಿಕ ಸೇಡು ತೀರಿಸಿಕೊಂಡಿದೆ.
ಟಾಸ್ ಗೆದ್ದ ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿ ಸವಾಲಿನ ಗುರಿ ನೀಡಿತು. ನಾಯಕ ರಜತ್ ಪಟೀದಾರ್ 51, ಕೊಹ್ಲಿ 31, ಸಾಲ್ಟ್ 32, ಪಡಿಕಲ್ 27 ರನ್ ಗಳಿಸಿ ಔಟ್ ಆದರು. ಸಿಎಸ್ಕೆ ಪರ ನೂರ್ ಅಹ್ಮದ್ 3 ವಿಕೆಟ್ ಪಡೆದು ಮಿಂಚಿದರು. ಮತೀಶ್ ಪತಿರಾಣಾ 2, ಖಲೀಲ್ ಅಹ್ಮದ್ ಹಾಗೂ ಅಶ್ವಿನ್ ತಲಾ 1 ವಿಕೆಟ್ ಪಡೆದರು.
ಈ ಸವಾಲಿನ ಗುರಿ ಬೆನ್ನು ಹತ್ತಿದ್ದ ಸಿಎಸ್ಕೆ ಪಡೆಗೆ ಆರ್ ಸಿಬಿ ಆರಂಭದಿಂದಲೇ ಕಾಡಿತು. 2ನೇ ಓವರ್ ನಲ್ಲಿ ತ್ರಿಪಾಠಿ 5 ರನ್ ಗೆ ಔಟ್ ಮಾಡಿದ್ದು ಯಶ್ ದಯಾಳ್. ನಾಯಕ ಗಯಕ್ವಾಡ್ ರನ್ನು ಹಜಲ್ ವುಡ್ ಡಕೌಟ್ ಮಾಡಿದರು. ದೀಪಕ್ ಹೂಡಾ 4, ಸ್ಯಾಮ್ ಕರನ್ 8, ಶಿವಂ ದುಬೆ 19 ರನ್ ಗಳಿಸಿದರು. ಕೊನೆಯಲ್ಲಿ ಜಡೇಜಾ 25, ಧೋನಿ ಅಜೇಯ 30 ರನ್ ಗಳಿಸಿದರು. ಸಿಕ್ಸ್, ಫೋರ್ ಬಾರಿಸಿ ಅಬ್ಬರಿಸಿದರು. ಆದರೆ, ಅದಾಗ್ಲೇ ಪಂದ್ಯ ಆರ್ ಸಿಬಿ ಪರ ಬಂದು ನಿಂತಿತ್ತು. ಅಂತಿಮವಾಗಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿ ಸೋಲು ಕಂಡಿತು. ಆರ್ ಸಿಬಿ ನಾಯಕ ರಜತ್ ಪಟೀದಾರ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.
17 ವರ್ಷಗಳ ಬಳಿಕ ಗೆದ್ದ ಆರ್ ಸಿಬಿ: 2008ರಲ್ಲಿ ಐಪಿಎಲ್ ಶುರುವಾದ ಚೆನ್ನೈ ವಿರುದ್ಧ ತವರು ನೆಲದಲ್ಲಿ ಗೆಲುವು ಸಾಧಿಸುವ ಮೂಲಕ ಸಂಭ್ರಮಿಸಿದ್ದು ಆರ್ ಸಿಬಿ ಮುಂದೆ ಬರೋಬ್ಬರಿ 17 ವರ್ಷಗಳ ಕಾಲ ಒಂದೇ ಒಂದು ಗೆಲುವು ಕಾಣಲಿಲ್ಲ. ಚೆನ್ನೈನ ಚಪಾಕ್ ಅಂಗಳದಲ್ಲಿ ಆರ್ ಸಿಬಿ ಗೆಲುವು ಅನ್ನೋದು ಕಾಡುತ್ತಲೇ ಇತ್ತು. ಇದಕ್ಕೆ ಶುಕ್ರವಾರ ಸಂಜೆ ತೆರೆ ಬಿದ್ದಿತ್ತು. ಬರೋಬ್ಬರಿ 17 ವರ್ಷಗಳ ಬಳಿಕ ಸಿಎಸ್ಕೆ ತವರಿನಲ್ಲಿ ಬೆಂಗಳೂರು ಹುಡುಗರು ಗೆದ್ದು ಬೀಗಿದರು. ಹೀಗಾಗಿ ಚೆನ್ನೈ ಬಿದಿ ಬಿದಿಯಲ್ಲಿ ಆರ್ ಸಿಬಿ ಬಾವುಟ ಹಾರಾಡಿತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ.