ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): 18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಜಯಿಸಿತು. ಹೀಗಾಗಿ ಬಹುದೊಡ್ಡ ಸಂಭ್ರಮ ಆಚರಿಸಲು ಜೂನ್ 4ರಂದು ಬೆಂಗಳೂರಿಗೆ ಬಂದಾಗ ದೊಡ್ಡ ದುರಂತ ನಡೆಯಿತು. ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ ಪರಿಣಾಮ ಕಾಲ್ತುಳಿತ ಉಂಟಾಗಿ 11 ಜನರು ಪ್ರಾಣ ಕಳೆದುಕೊಂಡರು. ಈ ದುರಂತ ನಡೆದು 85 ದಿನಗಳ ಬಳಿಕ ಆರ್ ಸಿಬಿ ಮೊದಲ ಬಾರಿಗೆ ಪೋಸ್ಟ್ ಮಾಡಿದೆ. 12ನೇ ಸೈನಿಕನ ಹೃದಯಪೂರ್ವಕ ಪತ್ರ ಎಂದು ಬರೆದು ಪೋಸ್ಟ್ ಮಾಡಿದೆ.
ನಾವು ಪೋಸ್ಟ್ ಮಾಡಿ ಸುಮಾರು 3 ತಿಂಗಳಾಗಿದೆ. ನಮ್ಮ ಮೌನ ಬರೀ ಖಾಲಿತನವಲ್ಲ ದುಃಖ ತುಂಬಿದ ತೀವ್ರವಾದ ಮೌನ. ಈ ಮಾಧ್ಯಮದ ಮೂಲಕ ನೀವೆಲ್ಲ ಸಂಭ್ರಮಿಸುವ ಕ್ಷಣಗಳನ್ನು, ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೇವು. ಆದರೆ, ಜೂನ್ 4ರ ಘಟನೆ ಎಲ್ಲವನ್ನು ಬದಲಾಯಿಸಿತು. ನಮ್ಮ ಹೃದಯ ಒಡೆಯಿತು. ಈ ಮೌನ ಶ್ರದ್ಧೆಯಿಂದ ಕೂಡಿದ ಶ್ರದ್ಧಾಂಜಲಿ. ಈ ನೋವಿನ ಸಂದರ್ಭದಲ್ಲಿ ಸಾಕಷ್ಟು ವಿಷಯಗಳನ್ನು ಕಲಿತ್ತಿದ್ದೇವೆ. ಯೋಚಿಸಿದ್ದೇವೆ. ನೋವನ್ನೇ ನಂಬಿಕೆಯಾಗಿ, ಶ್ರದ್ಧೆಯಾಗಿ ಬದಲಾಯಿಸಬೇಕೆಂದ ಫಲವಾಗಿ ಆರ್ ಸಬಿ ಕೇರ್ಸ್ ಹುಟ್ಟುಕೊಂಡಿದೆ. ನಿಮ್ಮೊಂದಿಗೆ ನಿಲ್ಲುವ ಭರವಸೆಯೊಂದಿಗೆ ಕರ್ನಾಟಕದ ಹೆಮ್ಮೆಯಾಗಿ ಮುಂದೆ ಸಾಗುತ್ತೇವೆ. ಇದು ನಮ್ಮ ಕಾಳಜಿ, ಪ್ರತಿಜ್ಞೆ ಎಂದು ಸುದೀರ್ಘವಾದ ಪೋಸ್ಟ್ ಮಾಡಿದೆ.