ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕ್ರಿಕೆಟ್ ಪ್ರೇಮಿಗಳೂ ಹೃದಯ ಬಡಿತ ಹೆಚ್ಚಿಸುವ, ಸಿಕ್ಕಾಪಟ್ಟೆ ಕಿಕ್ ಕೊಡುವೆ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಶುರುವಾಗಿದೆ. ಕೊಲ್ಕತ್ತಾದಲ್ಲಿ ಇಂದು ಸಂಜೆ ಮೊದಲ ಪಂದ್ಯ ನಡೆಯಲಿದೆ. 6 ಗಂಟೆಯಿಂದ ಟೂರ್ನಿ ಉದ್ಘಾಟನಾ ಕಾರ್ಯಕ್ರಮ ಶುರುವಾಗಲಿದ್ದು, ಬಾಲಿವುಡ್ ನಟಿ ದಿಶಾ ಪಟಾನಿ ಹಾಟ್ ಡ್ಯಾನ್ಸ್ ಕಿಕ್ ನೀಡಲಿದೆ. ಗಾಯಕಿ ಶ್ರೇಯಾ ಘೋಷಾಲ್ ಗಾಯನ ಮೋಡಿ ಮಾಡಲಿದೆ. ಇನ್ನು ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿವೆ.
18 ವರ್ಷಗಳ ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ಹಾಗೂ ಕೆಕೆಆರ್ 34 ಬಾರಿ ಎದುರು ಬದುರಾಗಿವೆ. 21 ಪಂದ್ಯಗಳಲ್ಲಿ ಕೆಕೆಆರ್ ಗೆದ್ದು ಲೀಡ್ ನಲ್ಲಿದೆ. ಈಡನ್ ಗಾರ್ಡನ್ ಮೈದಾನದಲ್ಲಿ ಆರ್ ಸಿಬಿ ಕಳಪೆ ಸಾಧನೆ ಮಾಡಿದಿದ್ದಿದೆ. 2017ರಲ್ಲಿ ಕೇವಲ 49 ರನ್ ಗಳಿಗೆ ಬೆಂಗಳೂರು ಹುಡುಗರು ಆಲೌಟ್ ಆಗಿದ್ದರು. ಮತ್ತೊಂದು ಕಡೆ 2019ರಲ್ಲಿ ಕೆಕೆಆರ್ ತವರಿನ ಮೈದಾನದಲ್ಲಿ 2 ವಿಕೆಟ್ ನಷ್ಟಕ್ಕೆ 232 ರನ್ ಬಾರಿಸಿ ದಾಖಲೆ ಮಾಡಿದೆ. ಹೀಗಾಗಿ ಆರಂಭಿಕ ಪಂದ್ಯ ಕುತೂಹಲ ಮೂಡಿಸಿದೆ. ಆರ್ ಸಿಬಿ ನಾಯಕನಾಗಿ ರಜತ್ ಪಟೇದಾರ್ ತಂಡ ಮುನ್ನಡೆಸಲಿದ್ದಾರೆ. ಅಜಿಂಕ್ಯ ರಹಾನೆ ಕೆಕೆಆರ್ ತಂಡದ ನಾಯಕರಾಗಿದ್ದಾರೆ.