ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಐಪಿಎಲ್ 2025 ಟೂರ್ನಿಯ ಫೈನಲ್ ಪಂದ್ಯ ಹಾಗೂ ಆರ್ ಸಿಬಿ ಹಾಗೂ ಎಸ್ಆರ್ ಎಚ್ ನಡುವಿನ ಪಂದ್ಯವನ್ನು ಸಹ ಸ್ಥಳಾಂತರಿಸಲಾಗಿದೆ. ಫೈನಲ್ ಪಂದ್ಯ ಗುಜರಾತಿನ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಆರ್ ಸಿಬಿ ಹಾಗೂ ಎಸ್ಆರ್ ಎಚ್ ಪಂದ್ಯವನ್ನು ಲಖನೌಗೆ ಸ್ಥಳಾಂತರಿಸಲಾಗಿದೆ.
ಹಿಂದಿನ ವೇಳಾಪಟ್ಟಿ ಪ್ರಕಾರ ಕ್ವಾಲಿಫೈಯರ್-1 ಹಾಗೂ ಎಲಿಮೀನೆಟರ್ ಪಂದ್ಯಗಳು ಹೈದ್ರಾಬಾದ್ ನಲ್ಲಿ ನಡೆಯಬೇಕಿತ್ತು. ಕ್ವಾಲಿಫೈಯರ್-2 ಪಂದ್ಯ ಕೊಲ್ಕತ್ತಾದಲ್ಲಿ ನಿಗದಿಯಾಗಿತ್ತು. ಆದರೆ, ಮಳೆಯ ಕಾರಣಕ್ಕೆ ಪಂದ್ಯಗಳನ್ನು ಸ್ಥಳಾಂತರಿಸಲಾಗಿದೆ. ಕ್ವಾಲಿಫೈಯರ್-1 ಮೇ 29ರಂದು ಮುಲ್ಲನಪುರ ಮೈದಾನದಲ್ಲಿ, ಕ್ವಾಲಿಫೈಯರ್-2 ಪಂದ್ಯವನ್ನು ಮೇ 30ರಂದು ಅಹಮದಾಬಾದ್ ನಲ್ಲಿ ಹಾಗೂ ಜೂನ್ 3ರಂದು ಫೈನಲ್ ಪಂದ್ಯ ನಡೆಯಲಿದೆ.