ಪ್ರಜಾಸ್ತ್ರ ಸುದ್ದಿ(Photo X/ @RCBinKannada)
ಬೆಂಗಳೂರು(Bengaloru): ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇರುವಷ್ಟು ಫ್ಯಾನ್ಸ್ ಕ್ರೇಜ್ ಮತ್ತೊಂದು ತಂಡಕ್ಕಿಲ್ಲ. ಕಳೆದ 18 ವರ್ಷಗಳಿಂದ ಒಮ್ಮೆಯೂ ಕಪ್ ಗೆಲ್ಲದಿದ್ದರೂ ಅಭಿಮಾನಿಗಳು ಆರ್ ಸಿಬಿ ಬೆಂಬಲಿಸಿಕೊಂಡು ಬರುತ್ತಿದ್ದಾರೆ. ಇದೀಗ 2025ರ ಟೂರ್ನಿಗೆ ತಂಡ ಸಿದ್ಧವಾಗಿದೆ. ಇದರಲ್ಲಿ ಕನ್ನಡಿಗರಿಗೆ ಅವಕಾಶ ಕೊಟ್ಟಿಲ್ಲ. ಬರೀ ಭಾವನಾತ್ಮಕವಾಗಿ ಬಳಸಿಕೊಳ್ಳುವ ಕುತಂತ್ರ ನಡೆದಿದೆ. ಬೆಂಗಳೂರು ಹೆಸರನ್ನೇ ಕೈ ಬಿಡಿ ಎಂದು ಹೇಳುತ್ತಿದ್ದಾರೆ.
https://twitter.com/iAdarshAdi/status/1861292049766449623
ಇದೆಲ್ಲದರ ನಡುವೆ ಆರ್ ಸಿಬಿ ಆಡಳಿತ ಮಂಡಳಿಯ ವಿರುದ್ಧ ಈಗ ಎಕ್ಸ್ ಖಾತೆ ವಿಚಾರವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ. ಹಿಂದಿಯಲ್ಲಿ ಎಕ್ಸ್ ಖಾತೆ ತೆರೆದು ಅಲ್ಲಿ ತಂಡದ ಬಗ್ಗೆ ಹಿಂದಿಯಲ್ಲಿ ಮಾಹಿತಿ ನೀಡಲಾಗುತ್ತಿದೆ. ಇದರ ವಿರುದ್ಧ ಕೂಗು ಎದ್ದಿದೆ. ಹಿಂದಿ ಬಳಸಕ್ಕೆ ಒಂದು ನೆಪ ಬೇಕಿತ್ತು. ಕನ್ನಡದಲ್ಲೊಂದು ಖಾತೆ ತೆರೆದು, ಜೊತೆಗೆ ಹಿಂದಿಯಲ್ಲಿ ಖಾತೆ. ಇಂಥಾ ಶೋಕಿ ಬೇಡ. ಮುಖ್ಯ ಖಾತೆಯಲ್ಲಿಯೇ ಕನ್ನಡ ಬಳಸಿ ಎಂದು ಪ್ರತಿಕ್ರಿಯೆ ನೀಡಲಾಗಿದೆ.
https://twitter.com/nks155/status/1861300432792101289
ಇನ್ನೊಬ್ಬರು ಇದನ್ನು ಅಳಿಸಿ ಇಲ್ಲದಿದ್ದರೆ ನಾವು ನಿಮ್ಮನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ. ಯಾಕ್ ಬಕೆಟ್ ಹಿಡಿತೀರಾ ಹಿಂದಿವಾಲಾಗಳಿಗೆ ಎಂದು ಮತ್ತೊಬ್ಬರು ಕಿಡಿ ಕಾರಿದ್ದಾರೆ. ಹೀಗೆ ಸಾಕಷ್ಟು ಅಭಿಮಾನಿಗಳು ಆರ್ ಸಿಬಿ ಎಕ್ಸ್ ಖಾತೆಯಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಂದೆ ಇದು ತಂಡದ ಬೆಂಬಲದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಕಾದು ನೋಡಬೇಕು.