ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಸೋಮವಾರ ಸಂಜೆ ಇಲ್ಲಿನ ವಾಂಖಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಅತ್ಯಂತ ರೋಚಕವಾಗಿತ್ತು. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯೆ, ಬೆಂಗಳೂರು ತಂಡಕ್ಕೆ ಬ್ಯಾಟಿಂಗ್ ಗೆ ಆಹ್ವಾನ ನೀಡಿದರು. ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 221 ರನ್ ಗಳ ಸ್ಕೋರ್ ಕಲೆ ಹಾಕುವ ಮೂಲಕ ಬಿಗ್ ಚಾಲೆಂಜ್ ನೀಡಿತು.
ವಿರಾಟ್ ಕೊಹ್ಲಿ 67, ನಾಯಕ ಪಟೀದಾರ್ 64, ವಿಕೆಟ್ ಕೀಪರ್ ಜಿತೇಶ್ ಶರ್ಮಾ ಅಜೇಯ 40, ಪಡಿಕಲ್ 37 ರನ್ ಗಳಿಂದಾಗಿ 200 ರನ್ ಗಳ ಗಡಿ ದಾಟಿತು. ಈ ಇನ್ನಿಂಗ್ಸ್ ನಲ್ಲಿ 13 ಸಿಕ್ಸ್, 17 ಫೋರ್ ಗಳು ಬಂದವು. ಮುಂಬೈ ಪರ ಬೋಲ್ಟ್ 2, ನಾಯಕ ಹಾರ್ದಿಕ್ ಪಾಂಡ್ಯೆ 2 ವಿಕೆಟ್ ಪಡೆದರು. ವಿಘ್ನೇಶ್ 1 ವಿಕೆಟ್ ಪಡೆದರು.
ಬಿಗ್ ಸ್ಕೋರ್ ಬೆನ್ನು ಹತ್ತಿದ ಮುಂಬೈ ಆರಂಭದಲ್ಲಿಯೇ ಆಘಾತ ಎದುರಿಸಿತು. ಇಂಪ್ಯಾಕ್ಟ್ ಪ್ಲೇಯರ್ ರೋಹಿತ್ ಶರ್ಮಾ 17, ರಿಯಾನ್ 17, ವಿಲ್ ಜಾಕ್ಸ್ 22, ಸೂರ್ಯಕುಮಾರ್ ಯಾದವ್ 22 ರನ್ ಗಳಿಗೆ ಔಟ್ ಆದರು. ಆಗ ಆರ್ ಸಿಬಿ ಅಭಿಮಾನಿಗಳ ಖುಷಿ ಜೋರಾಗಿತ್ತು. ಆದರೆ, ತಿಲಕ್ ವರ್ಮಾ, ನಾಯಕ ಹಾರ್ದಿಕ್ ಪಾಂಡ್ಯೆ ಅಬ್ಬರದ ಬ್ಯಾಟಿಂಗ್ ಮುಂಬೈ ಅಭಿಮಾನಿಗಳ ಖುಷಿ ಹೆಚ್ಚಿಸಿತು. ಈ ಜೋಡಿ ಆರ್ ಸಿಬಿ ಕೈಯಿಂದ ಗೆಲುವನ್ನು ಕಸಿದುಕೊಳ್ಳುವ ಎಲ್ಲ ಪ್ರಯತ್ನ ಮಾಡಿತು. ಪಾಂಡ್ಯೆ ಕೇವಲ 15 ಬೌಲ್ ಗಳಲ್ಲಿ 42 ರನ್ ಚಚ್ಚಿದರು. ವರ್ಮಾ 29 ಬೌಲ್ ಗಳಲ್ಲಿ 56 ರನ್ ಗಳಿಸಿದರು.
ಇವರಿಬ್ಬರ ಭರ್ಜರಿ ಆಟದಿಂದ ಆರ್ ಸಿಬಿ ಅಭಿಮಾನಿಗಳು ಸೈಲೆಂಟ್ ಆಗಿದ್ದರು. ಆದರೆ, ಕೃನಾಲ್ ಪಾಂಡ್ಯೆ ಅದ್ಭುತ್ ಬೌಲಿಂಗ್, ಸಾಲ್ಟ್ ಸೂಪರ್ ಕ್ಯಾಚ್ ಇಡೀ ಮ್ಯಾಚ್ ದಿಕ್ಕು ಬದಲಿಸಿತು. ಹೀಗಾಗಿ ಅಂತಿಮವಾಗಿ ಮುಂಬೈ 209 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು. ಪಂದ್ಯ ಕೊನೆಯ ಓವರ್ ತನಕ ಹೋಗಿದ್ದು ಎರಡೂ ತಂಡಗಳ ಅಭಿಮಾನಿಗಳು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತು. ಕೃನಾಲ್ ಪಾಂಡ್ಯೆ 4, ಯಶ್ ದಯಾಳ್ 2, ಹಜಲ್ ವುಡ್ 2 ವಿಕೆಟ್ ಪಡೆದು ಮಿಂಚಿದರು. ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು. ಆರ್ ಸಿಬಿ ನಾಯಕ ರಜತ್ ಪಟೀದಾರ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.