Ad imageAd image

ಸಿಎಸ್ಕೆ ವಿರುದ್ಧ ಆರ್ ಸಿಬಿ ಭರ್ಜರಿ ಗೆಲುವು

Nagesh Talawar
ಸಿಎಸ್ಕೆ ವಿರುದ್ಧ ಆರ್ ಸಿಬಿ ಭರ್ಜರಿ ಗೆಲುವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಇಲ್ಲಿಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ಸಂಜೆ ನಡೆದ ಐಪಿಎಲ್ ನ 11ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಿದ್ದವು. ಚೆನ್ನೈ ವಿರುದ್ಧ ಬೆಂಗಳೂರು ತಂಡ 43 ರನ್ ಗಳ ಅಂತರದಿಂದ ಗೆಲುವು ಸಾಧಿಸಿತು.

ಟಾಸ್ ಗೆದ್ದ ಸಿಎಸ್ಕೆ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಆರ್ ಸಿಬಿ ಮೊದಲು ಬ್ಯಾಟ್ ಮಾಡಿತು. ಚೆನ್ನೈ ತಂಡದ ಬೌಲರ್ ಗಳನ್ನು ಭರ್ಜರಿಯಾಗಿ ದಂಡಿಸಿದರು. ಸಾಲ್ಟ್ 46, ಕೊಹ್ಲಿ 28, ಪಡಿಕಲ್ 29 ಬೌಲ್ ಗಳಲ್ಲಿ 50, ನಾಯಕ ಪಟೇದಾರ್ 19 ಬೌಲ್ ಗಳಲ್ಲಿ ಅಜೇಯ 48, ಟಿಮ್ ಡೇವಿಡ್ 25 ಬೌಲ್ ಗಳಲ್ಲಿ ಅಜೇಯ 70 ರನ್ ಗಳಿಸಿದರು. ಈ ವೇಳೆ 19 ಸಿಕ್ಸ್ 14 ಫೋರ್ ಗಳು ಬಂದಿವೆ. 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 250 ರನ್ ಕಲೆ ಹಾಕಿದರು. ಸಿಎಸ್ಕೆ ಪರ ಅನ್ಶುಲ್, ಓವರ್ ಟನ್, ದುಬೆ ತಲಾ 1 ವಿಕೆಟ್ ಪಡೆದರು.

ಬಿಗ್ ಸ್ಕೋರ್ ಚೇಸ್ ಮಾಡಿದ ಸಿಎಸ್ಕೆ ಆರಂಭದಲ್ಲಿ ವಿಕೆಟ್ ಗಳನ್ನು ಕಳೆದುಕೊಂಡಿತು. ಸಂಜು ಸ್ಯಾಮ್ಸನ್ 9, ನಾಯಕ ಗಾಯಕ್ವಾಡ್ 7, ಯುವ ಆಟಗಾರರಾದ ಆಯುಷ್ 1, ಕಾರ್ತಿಕ್ ಶರ್ಮಾ 6 ರನ್ ಗಳಿಸಿದರು. ಇನ್ನೊಂದು ಕಡೆ ಸರ್ಫರಾಜ್ ಖಾನ್ 25 ಬೌಲ್ ಗಳಲ್ಲಿ 50 ರನ್ ಗಳಿಸಿದರು. ಶಿವಂ ದುಬೆ 18, ಯುವ ಆಟಗಾರ ಪ್ರಶಾಂತ್ ವೀರ್ 43, ಓವರ್ ಟನ್ 37 ಅನ್ಶುಲ್ 19, ನೂರ್ ಅಹ್ಮದ್ 8, ಹೆನ್ರಿ 2 ರನ್ ಗಳಿಸಿದರು. 19.4 ಓವರ್ ಗಳಲ್ಲಿ 207 ರನ್ ಗಳಿಗೆ ಆಲೌಟ್ ಆದರು. ಆರ್ ಸಿಬಿ ಪರ ಭುವನೇಶ್ವರ ಕುಮಾರ್ 3, ಡುಫಿ, ಕುನಾಲ್ ಪಾಂಡ್ಯ, ಅಭಿನಂದನ್ ಸಿಂಗ್ ತಲಾ 2 ವಿಕೆಟ್ ಪಡೆದರು. ಸುಯೇಶ್ 1 ವಿಕೆಟ್ ಪಡೆದರು. ಟಿಮ್ ಡೇವಿಡ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.

WhatsApp Group Join Now
Telegram Group Join Now
Share This Article