ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯ ಬಿಜಾಡಿ ಗ್ರಾಮದ ಬಿಜಿಎಸ್ ಲೇಔಟ್ ನಲ್ಲಿ ಭಾನುವಾರ ಸಂಜೆ ರಿಯಲ್ ಎಸ್ಟೇಟ್ ಉದ್ಯಮಿ(Real Estate Businessman) ಕೊಲೆಯಾಗಿದೆ. ಲೋನಾಥ್ ಸಿಂಗ್(28) ಕೊಲೆಯಾದ ಉದ್ಯಮಿಯಾಗಿದ್ದಾನೆ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ(Murder) ಮಾಡಿದ್ದಾರೆ. ಇದರ ಹಿಂದೆ ಪ್ರೀತಿ ವಿಚಾರ ಕಾರಣವೆಂದು ಹೇಳಲಾಗುತ್ತಿದೆ. ಕೊಲೆಯಾದ ಲೋಕನಾಥ್ ತಂದೆ ತಾಯಿ ಇಬ್ಬರು ಮೃತಪಟ್ಟಿದ್ದರು. ಇರೋ ತಮ್ಮನಿಗೆ ಮದುವೆ ಮಾಡಿದ್ದ. ತಾನು ಮದುವೆಯಾಗಬೇಕು ಎಂದು ಪ್ಲಾನ್ ಮಾಡಿದ್ದ.
ದೂರದ ಸಂಬಂಧಿ ಹುಡುಗಿಯನ್ನು 2 ವರ್ಷಗಳಿಂದ(Love) ಪ್ರೀತಿಸುತ್ತಿದ್ದನಂತೆ. 2023ರಲ್ಲಿ ಹೆಣ್ಣು ಕೇಳಲು ಹೋಗಿದ್ದನಂತೆ. ಆಗ ಕುಟುಂಬಗಳ ನಡುವೆ ಗಲಾಟೆಯಾಗಿದೆಯಂತೆ. ಲೋಕನಾಥನಿಂದ ನಮ್ಮ ಮನೆಯಲ್ಲಿ ದುರ್ಘಟನೆ ನಡೆದಿದೆ ಎಂದು ಹುಡುಗಿ ತಂದೆ ಕೋಪ ಮಾಡಿಕೊಂಡಿದ್ದನಂತೆ. ಲೋಕನಾಥ್ ಸಹೋದರ ಹುಡುಗಿ ಕುಟುಂಬಸ್ಥರ ಮೇಲೆ ಅನುಮಾನ ಪಟ್ಟಿದ್ದಾನೆ. ಹಳೆ ಘಟನೆಯನ್ನು ಪ್ರಸ್ತಾಪಿಸಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪೊಲೀಸ್ ತನಿಖೆಯಿಂದ ಸತ್ಯ ತಿಳಿದು ಬರಬೇಕಿದೆ.