ಪ್ರಜಾಸ್ತ್ರ ಸುದ್ದಿ
ಸಿನಿಮಾ, ಕ್ರಿಕೆಟ್, ಬ್ಯುಸಿನೆಸ್ ಸೇರಿದಂತೆ ಕೆಲವೊಂದು ಹೈಕ್ಲಾಸ್ ಮಂದಿಗೆ ಮದುವೆ. ಡಿವೋರ್ಸ್ ಅನ್ನೋದು ತುಂಬಾ ಕಾಮನ್ ಆಗಿದೆ. ವಿಚ್ಛೇದನ ಪಡೆಯುತ್ತಲೇ ಮತ್ತೊಂದು ಸಂಬಂಧದಲ್ಲಿ ಮುಳುಗಿ ಬಿಡುತ್ತಾರೆ. ಅಷ್ಟೊಂದು ವರ್ಷಗಳ ಕಾಲ ಜೊತೆಯಾಗಿ ಕಳೆದ ಸಂಗಾತಿ ಬಗ್ಗೆ ಯಾವುದೇ ಭಾವನೆಗಳೇ ಇಲ್ಲ ಎನ್ನುವ ರೀತಿಯಲ್ಲಿ ವರ್ತಿಸಲು ಶುರು ಮಾಡುತ್ತಾರೆ. ಇದೀಗ ಬಾಲಿವುಡ್ ಅಂಗಳದ ಮಿಸ್ಟರ್ ಫರ್ಫೆಕ್ಟ್ ಆಮೀರ್ ಖಾನ್ 60ನೇ ವಯಸ್ಸಿನಲ್ಲಿ 3ನೇ ಮದುವೆಗೆ ಸಜ್ಜಾಗುತ್ತಿದ್ದಾರೆ.
ಇದೀಗ ಬೆಂಗಳೂರು ಮೂಲದ ಗೌರಿ ಎನ್ನುವ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದಾರೆ. ಇವರಿಬ್ಬರದು 25 ವರ್ಷಗಳ ಹಿಂದಿನ ಪರಿಚಯವಂತೆ. ಈಕೆಗೆ 6 ವರ್ಷದ ಮಗನಿದ್ದಾನೆ. ಎರಡು ಕುಟುಂಬದ ಕಡೆ ಈ ಸಂಬಂಧ ಇಷ್ಟವಾಗಿದೆಯಂತೆ. ಕಳೆದ ಒಂದೂವರೆ ವರ್ಷದಿಂದ ಒಟ್ಟಿಗೆ ವಾಸವಾಗಿದ್ದೇವೆ ಎಂದು ನಟ ಆಮೀರ್ ಖಾನ್ ಹೇಳಿದ್ದಾರೆ. ಇನ್ನು ಆಮೀರ್ ಮದುವೆಯಾಗಿರುವವರೆಲ್ಲ ಅನ್ಯಧರ್ಮಿಯರು. 60 ವಯಸ್ಸಿನಲ್ಲಿ 3ನೇ ಸಂಗಾತಿಯೊಂದಿಗೆ ಜೀವನ ಸಾಗಿಸುತ್ತಿದ್ದು, ಇದೆಷ್ಟು ಕಾಲ ಎನ್ನುವ ಪ್ರಶ್ನೆ ಎಲ್ಲರಿಯೂ ಮೂಡಿದೆ.
1986ರಲ್ಲಿ ನಟ ಆಮೀರ್ ಖಾನ್, ನಟಿ, ನಿರ್ಮಾಪಕಿ ರೀನಾ ದತ್ ಜೊತೆಗೆ ಮದುವೆಯಾದರು. ಇವರಿಗೆ ಇರಾ ಖಾನ್, ಜುನೈದ್ ಖಾನ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. 2002ರಲ್ಲಿ ಇವರಿಬ್ಬರು ಬೇರೆಯಾದರು. ಮುಂದೆ 2005ರಲ್ಲಿ ಕರಣ್ ರಾವ್ ಜೊತೆಗೆ ಮದುವೆಯಾದರು. ಇವರಿಗೊಬ್ಬ ಮಗನಿದ್ದಾನೆ. 2021ರಲ್ಲಿ ಇವರಿಬ್ಬರು ಬೇರೆಯಾದರು. ಈಗ ಗೌರಿ ಎನ್ನುವ ಮಹಿಳೆಯೊಂದಿಗೆ ಡೇಟಿಂಗ್ ನಲ್ಲಿದ್ದಾರೆ. ಸಿನಿಮಾದಲ್ಲಿ ಒಮ್ಮೆ ಪ್ರೀತಿ. ಒಂದೇ ಹುಡುಗಿ ಎಂದು ಹೇಳುವ ನಟ, ನಟಿಯರ ನಿಜವಾದ ಬದುಕು ಎಷ್ಟೊಂದು ತದ್ವಿರುದ್ಧವಾಗಿರುತ್ತೆ. ತಮ್ಮ ಚಿತ್ರಗಳ ಮೂಲಕ ಸಮಾಜಕ್ಕೆ ಸಂದೇಶ ಕೊಡಲು ಹೋಗುವ ಇವರು ತಮ್ಮ ಜೀವನದಲ್ಲಿ ಯಾಕೆ ಹೀಗೆ ಬದುಕುತ್ತಾರೆ ಅನ್ನೋದು ಒಂದು ಪ್ರಶ್ನೆಯಾದರು. ದುಡ್ಡು, ಹೆಸರು ಇದ್ದರೆ ಏನು ಬೇಕಾದರೂ ಮಾಡಬಹುದು ಅನ್ನೋದನ್ನು ಜನರು ಮತ್ತೆ ಮತ್ತೆ ಹೇಳುವಂತೆ ಮಾಡುತ್ತಿರುವುದು ನಿಜಕ್ಕೂ ದುರಂತ.