ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಮೊದಲ ಬಾರಿಗೆ ಶಾಸಕಿಯಾಗಿರುವ ಬಿಜೆಪಿಯ ರೇಖಾ ಗುಪ್ತಾಗೆ ಮುಖ್ಯಮಂತ್ರಿಯ ಪದವಿಯೇ ಒಲದಿದೆ. ಈ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ರಾಷ್ಟ್ರ ರಾಜಧಾನಿಯ 4ನೇ ಮಹಿಳಾ ಸಿಎಂ ಎನ್ನುವ ಹೆಗ್ಗಳಿಕೆ ಇವರದಾಗಿದೆ. ಗುರುವಾರ ಮಧ್ಯಾಹ್ನ ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಇವರೊಂದಿಗೆ 6 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಶಾಲಿಮಾರ್ ಬಾಗ್ ಕ್ಷೇತ್ರದ ಬಿಜೆಪಿ ಶಾಸಕಿ ರೇಖಾ ಗುಪ್ತಾ ಅವರನ್ನು ದೆಹಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಬುಧವಾರ ರಾತ್ರಿ ಆಯ್ಕೆ ಮಾಡಲಾಗಿದೆ. 13 ರಾಜ್ಯಗಳಲ್ಲಿ ಬಿಜೆಪಿ ಮುಖ್ಯಮಂತ್ರಿಗಳಿದ್ದಾರೆ. ಎಲ್ಲಿಯೂ ಮಹಿಳಾ ಮುಖ್ಯಮಂತ್ರಿ ಇಲ್ಲ. ಹೀಗಾಗಿ ಇದನ್ನು ಸರಿಪಡಿಸಿಲು ದೆಹಲಿಯಲ್ಲಿ ಮಹಿಳಾ ಮುಖ್ಯಮಂತ್ರಿಯನ್ನಾಗಿ ಬಿಜೆಪಿ ಹೈಕಮಾಂಡ್ ಮಾಡಿದೆ. ಅರವಿಂದ್ ಕೇಜ್ರಿವಾಲ್ ಸೋಲಿಸಿದ ಪರ್ವೇಶ್ ವರ್ಮಾ ಸಿಎಂ ಆಗುತ್ತಾರೆ ಎನ್ನುವ ಸುದ್ದಿ ದಟ್ಟವಾಗಿತ್ತು. ಅದೆಲ್ಲವೂ ಸುಳ್ಳಾಗಿದೆ.
27 ವರ್ಷಗಳ ಬಳಿಕ ದೆಹಲಿ ಗದ್ದೆಗೆ ಹಿಡಿದಿರುವ ಬಿಜೆಪಿ ಮಹಿಳೆಯನ್ನು ಸಿಎಂ ಮಾಡಿದೆ. ಈ ಮೊದಲು ಬಿಜೆಪಿಯಿಂದ ಸುಷ್ಮಾ ಸ್ವರಾಜ್, ಕಾಂಗ್ರೆಸ್ ನಿಂದ ಶೀಲಾ ದೀಕ್ಷಿತ್, ಆಪ್ ನಿಂದ ಆತಿಶಿ ಸಿಎಂ ಆಗಿ ಆಡಳಿತ ನಡೆಸಿದ್ದಾರೆ. 4ನೇ ಮಹಿಳಾ ಸಿಎಂ ಆಗಿ ರೇಖಾ ಗುಪ್ತಾ ಆಯ್ಕೆ ಆಗಿದ್ದಾರೆ. 1974ರಲ್ಲಿ ಹರಿಯಾಣದ ಜಿಂದ್ ಜಿಲ್ಲೆಯ ನಂದಗಢದಲ್ಲಿ ರೇಖಾ ಜನಿಸಿದರು. ಇವರ ತಂದೆ ಎಸ್ ಬಿಐದಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ರೇಖಾ ಎರಡು ವರ್ಷ ಇದ್ದಾಗಲೇ ದೆಹಲಿಗೆ ಬಂದು ನೆಲೆಸಿದ್ದಾರೆ. ಮೂರು ಬಾರಿ ಕೌನ್ಸಿಲರ್ ಆಗಿದ್ದ ರೇಖಾ ಗುಪ್ತಾ ಇದೀಗ ಸಿಎಂ ಹುದ್ದೆ ಅಲಂಕರಿಸುತ್ತಿದ್ದಾರೆ.