ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಗೆಳತಿ ಪವಿತ್ರಾಗೌಡ ಸೇರಿದಂತೆ 17 ಆರೋಪಿಗಳ ಬಂಧನವಾಗಿತ್ತು. ಇದರಲ್ಲಿ ಅದಾಗಲೇ 12 ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಉಳಿದ ಐವರು ಆರೋಪಿಗಳಿಗೆ ಸೋಮವಾರ 57ನೇ ಸಿಸಿಹೆಚ್ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಹೀಗಾಗಿ ಇಂದು ಇವರೆಲ್ಲ ಬಿಡುಗಡೆಯಾಗುವ ಸಾಧ್ಯತೆಯಿದೆ.
ಪವನ್, ಧನರಾಜ್, ರಾಘವೇಂದ್ರ, ವಿನಯ್ ಹಾಗೂ ನಂದೀಶ್ ಇವರಿಗೆ ಜಾಮೀನು ಸಿಕ್ಕಿದೆ. ಇದರೊಂದಿಗೆ ಸುಮಾರು 6 ತಿಂಗಳ ಜೈಲುವಾಸದ ಬಳಿಕ ಹೊರಗೆ ಬರುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಎ1 ಆರೋಪಿ ಪವಿತ್ರಾಗೌಡ ಸೇರಿ 7 ಜನರಿಗೆ ಜಾಮೀನು ಸಿಕ್ಕಿದೆ. ಇದಕ್ಕೂ ಮೊದಲೇ ಎ2 ದರ್ಶನ್ ವೈದ್ಯಕೀಯ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದಿದ್ದರು. ಮುಂದೆ ಅವರಿಗೂ ನಿಯಮಿತ ಜಾಮೀನು ಸಿಕ್ಕಿತು. ಇದೀಗ ಉಳಿದ ಐವರಿಗೂ ಜಾಮೀನು ಸಿಕ್ಕಿದ್ದು, ಎಲ್ಲ 17 ಆರೋಪಿಗಳು ಹೊರಗಡೆ ಬಂದಂತಾಗಿದೆ. ತನಿಖಾಧಿಕಾರಿಗಳು ಇವರ ಜಾಮೀನು ರದ್ದತಿ ಕೋರಿ ಮೇಲ್ಮನವಿ ಸಲ್ಲಿಸುತ್ತಾರಾ, ಟ್ರಯಲ್ ನಡೆಸಲಾಗುತ್ತಾ ಎನ್ನುವ ಕುತೂಹಲವಿದೆ.