Ad imageAd image

ಕಾಂಗ್ರೆಸ್ ಜೊತೆ ಯತ್ನಾಳ ಮ್ಯಾಚ್ ಫಿಕ್ಸಿಂಗ್: ರೇಣುಕಾಚಾರ್ಯ

ಸ್ವಪಕ್ಷೀಯ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸುತ್ತಿರುವ, ನಾಯಕರ ವಿರುದ್ಧ ಮಾತನಾಡುತ್ತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕೇಸರಿ ನಾಯಕರು ಕಿಡಿ ಕಾರುತ್ತಿದ್ದಾರೆ.

Nagesh Talawar
ಕಾಂಗ್ರೆಸ್ ಜೊತೆ ಯತ್ನಾಳ ಮ್ಯಾಚ್ ಫಿಕ್ಸಿಂಗ್: ರೇಣುಕಾಚಾರ್ಯ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮೈಸೂರು(Mysore): ಸ್ವಪಕ್ಷೀಯ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸುತ್ತಿರುವ, ನಾಯಕರ ವಿರುದ್ಧ ಮಾತನಾಡುತ್ತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕೇಸರಿ ನಾಯಕರು ಕಿಡಿ ಕಾರುತ್ತಿದ್ದಾರೆ. ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಶನಿವಾರ ಶಕ್ತಿ ಪ್ರದರ್ಶನ ನಡೆಸಲಾಗಿದೆ. ಈ ವೇಳೆ ಮಾತನಾಡಿದ ಬಿಜೆಪಿ ನಾಯಕ ಎಂ.ಪಿ ರೇಣುಕಾಚಾರ್ಯ, ಕಾಂಗ್ರೆಸ್ ಜೊತೆಗೆ ಯತ್ನಾಳ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಹೀಗಾಗಿ ಮುಡಾ ಹಗರಣದ ಪಾದಯಾತ್ರೆಯಲ್ಲಿ ಭಾಗವಹಿಸಲಿಲ್ಲ ಎಂದರು.

ಬ್ಲ್ಯಾಕ್ ಮೇಲ್ ರಾಜಕಾರಣ ಮಾಡಿಕೊಂಡು ಸಿದ್ದರಾಮಯ್ಯಗೆ ಬೆಂಬಲ ನೀಡುತ್ತಿದ್ದಾರೆ. ಇವರ ಹರಕು ಬಾಯಿಯಿಂದ ಬಿಜೆಪಿಗೆ ಸೋಲಾಯಿತು. ಇಂತಹ ಕೆಲವು ಶಕುನಿಗಳು, ಮೀರ್ ಸಾಧಕರು ಯಡಿಯೂರಪ್ಪಗೆ ಕಾಟ ಕೊಡುತ್ತಲೇ ಇದ್ದಾರೆ. ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಿದ್ದು ಹೈಕಮಾಂಡ್. ಇವರನ್ನು ಬೈದರೆ ಹೈಕಮಾಂಡ್ ಗೆ ಬೈದಂತೆ ಎಂದು ಕಿಡಿ ಕಾರಿದರು. ಯತ್ನಾಳ ಉಚ್ಛಾಟನೆಗೆ ದೆಹಲಿಗೆ ನಾಯಕರಿಗೆ ಹೇಳಲಾಗುವುದು. ದಾವಣಗೆರೆಯಲ್ಲಿ ಮೂರ್ನಾಲ್ಕು ಲಕ್ಷ ಜನ ಸೇರಿಸಿ ಸಮಾವೇಶ ಮಾಡಲಾಗುವುದು ಎಂದು ಬಿಜೆಪಿ ನಾಯಕರು ಹೇಳಿದರು.

ಬಸವಣ್ಣ ಎಲ್ಲ ವರ್ಗದ ಜನರಿಗೆ ಸೇರಿದವರು. ಅವರ ವಿರುದ್ಧ ಹೇಳಿಕೆ ನೀಡಿದ ಯತ್ನಾಳಗೆ ಮಠಾಧೀಶರು ಛೀಮಾರಿ ಹಾಕಬೇಕು. ಪಕ್ಷದಿಂದ ಉಚ್ಛಾಟನೆಗೆ ಒತ್ತಾಯಿಸಬೇಕು ಎಂದರು. ಕಟ್ಟಾ ಸುಬ್ರಮಣ್ಯ ನಾಯ್ಡು ಸೇರಿ ಅನೇಕ ನಾಯಕರು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು. ವಿಜಯೇಂದ್ರ ಬಣದ ಮಾಜಿ ಸಚಿವರು, ಶಾಸಕರು ಸೇರಿದಂತೆ 38 ನಾಯಕರು ಶನಿವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಶಕ್ತಿ ಪ್ರದರ್ಶನ ತೋರಿಸಿದರು.

WhatsApp Group Join Now
Telegram Group Join Now
Share This Article