Ad imageAd image

ರೇಣುಕಾಸ್ವಾಮಿ ಕೊಲೆ ಪ್ರಕರಣ ಹಾಗೂ ಇತರೆ ಪ್ರಕರಣಗಳು

ನಟ ದರ್ಶನ್ ಗೆಳತಿ ಪವಿತ್ರಾಗೌಡಗೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತ ಅಶ್ಲೀಲ ಮೆಸೇಜ್, ಫೋಟೋಗಳನ್ನು ಕಳಿಸಿದ ವಿಚಾರವಾಗಿ ಹತ್ಯೆ ಮಾಡಲಾಗಿದೆ

Nagesh Talawar
ರೇಣುಕಾಸ್ವಾಮಿ ಕೊಲೆ ಪ್ರಕರಣ ಹಾಗೂ ಇತರೆ ಪ್ರಕರಣಗಳು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ನಟ ದರ್ಶನ್ ಗೆಳತಿ ಪವಿತ್ರಾಗೌಡಗೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತ ಅಶ್ಲೀಲ ಮೆಸೇಜ್, ಫೋಟೋಗಳನ್ನು ಕಳಿಸಿದ ವಿಚಾರವಾಗಿ ಹತ್ಯೆ ಮಾಡಲಾಗಿದೆ ಎನ್ನುವ ಆರೋಪ 17 ಜನರ ಮೇಲೆ ಬಂದಿದೆ. ಇದರಲ್ಲಿ ಮೂವರಿಗೆ ಜಾಮೀನು ಸಿಕ್ಕಿದೆ. ನಟ ದರ್ಶನ್, ಗೆಳತಿ ಪವಿತ್ರಾಗೌಡ ಸೇರಿ 14 ಜನರು ಜೈಲಿನಲ್ಲಿದ್ದಾರೆ. ಇವರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಇಲ್ಲಿ ದರ್ಶನ್ ಪ್ರಭಾವಿ ವ್ಯಕ್ತಿ. ಇತನಿಗೆ ಜಾಮೀನು ನೀಡಿದರೆ ಸಾಕ್ಷಿ ನಾಶ ಮಾಡಬಹುದು. ಸಂತ್ರಸ್ತರನ್ನು ತಮ್ಮಂತೆ ಮಾಡಿಕೊಳ್ಳಬಹುದು ಎನ್ನುವುದು ಸೇರಿ ಅನೇಕ ವಿಚಾರಗಳಿಗೆ ಜಾಮೀನು ತಿರಸ್ಕರಿಸಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಾಗಾದರೆ ಕೊಲೆ ಸೇರಿದಂತೆ ಅನೇಕ ಗಂಭೀರ ಕೃತ್ಯಗಳಲ್ಲಿ ದೇಶದಲ್ಲಿ ಪ್ರಭಾವಿಗಳಿಗೆ ಜಾಮೀನು ಸಿಕ್ಕಿಲ್ವಾ ಎನ್ನುವ ಪ್ರಶ್ನೆ ಎದ್ದಿದೆ.

ಇತ್ತೀಚಿನ ದಿನಗಳಲ್ಲಿ ಹೆಣ್ಮಕ್ಕಳನ್ನು ಅತ್ಯಂತ ಭಯಾನಕವಾಗಿ ಹತ್ಯೆ ಮಾಡಲಾಗುತ್ತಿದೆ. ಅತ್ಯಾಚಾರ ಮಾಡಿರುವುದಲ್ಲದೇ ಭೀಕರವಾಗಿ ಹತ್ಯೆಗಳು ನಡೆಯುತ್ತಿವೆ. ಇನ್ಯಾವುದೋ ಕಾರಣಕ್ಕೆ ಕೊಲೆ ಮಾಡಿ ದೇಹವನ್ನು ತುಂಡು ತುಂಡು ಮಾಡಲಾಗುತ್ತಿದೆ. ಮೃತದೇಹ ಕತ್ತರಿಸಿ ಫ್ರಿಡ್ಜ್ ನಲ್ಲಿ ಇಡಲಾಗುತ್ತಿದೆ. ಇಂತಹ ಸುದ್ದಿಗಳು ಬಂದಾಗ ಒಂದಿಷ್ಟು ಭಯ ಎನಿಸುತ್ತೆ. ಮಾಧ್ಯಗಳಲ್ಲಿ ಒಂದು ದಿನ ಆರ್ಭಟ. ಮತ್ತೆ ಮತ್ತೆ ಇಂತಹ ಭಯಾನಕ ಕೃತ್ಯಗಳು ಮರುಕಳಿಸುತ್ತವೆ. ಆದರೆ, ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಇರುವ ಕಾರಣಕ್ಕೆ ಇಷ್ಟೊಂದು ಪ್ರಚಾರ ಹಾಗೂ ಅಪಪ್ರಚಾರ ಎನ್ನುವುದು ಎಲ್ಲರಿಗೂ ಗೊತ್ತು. ಇಲ್ಲದೆ ಹೋಗಿದ್ದರೆ ಅಶ್ಲೀಲ ಫೋಟೋಕ್ಕೆ ಕಳಿಸಿದ್ದಕ್ಕೆ ಹತ್ಯೆ, ಆರೋಪಿಗಳ ಬಂಧನ ಎನ್ನುವುದರೊಂದಿಗೆ ಮುಗಿದು ಹೋಗುತ್ತಿತ್ತು. ಇದೆಲ್ಲವನ್ನು ನೋಡಿದರೆ ನಟ ದರ್ಶನ್ ಜಾಮೀನು ಪಡೆಯುವುದಕ್ಕೂ ಅನರ್ಹರಾ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ.

ದೇಶದಲ್ಲಿನ ಅಪರಾಧಿ ಕೃತ್ಯಗಳ ಸರಾಸರಿಯನ್ನು ನೋಡಿದರೆ ಯಾವ ರಾಜ್ಯದಲ್ಲಿ ಎಷ್ಟೊಂದು ಕೃತ್ಯಗಳು ನಡೆಯುತ್ತಿವೆ. ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಭೀಕರ ಕೊಲೆ, ಜಾತಿಯ ಕಾರಣಕ್ಕೆ ನಡೆದ ಹತ್ಯೆಗಳ ಪ್ರಕರಣಗಳಲ್ಲಿ ಅನೇಕ ರಾಜಕಾರಣಿಗಳ, ಉದ್ಯಮಿಗಳ, ಧಾರ್ಮಿಕ ವಲಯದಲ್ಲಿರುವವರ ಹೆಸರುಗಳು ಕೇಳಿ ಬಂದಿದೆ. ದೂರು ದಾಖಲಾಗಿವೆ. ಅನೇಕರು ಜೈಲಿಗೆ ಹೋಗಿ ಬಂದಿದ್ದಾರೆ. ನ್ಯಾಯಾಂಗ ಬಂಧನದಲ್ಲಿದ್ದಾಗ ಜಾಮೀನು ಪಡೆದು ಹೊರ ಬಂದು ವಿಚಾರಣೆ ಎದುರಿಸುತ್ತಿದ್ದಾರೆ. ದೇಶದ ಅತ್ಯಂತ ಪ್ರಭಾವಿ ನಾಯಕರುಗಳಲ್ಲಿ ಕೆಲವರ ವಿರುದ್ಧ ಕೇಳಿಬಂದಿರುವ, ದೂರು ದಾಖಲಾಗಿರುವ ಪ್ರಕರಣಗಳಲ್ಲಿ ಜಾಮೀನು, ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಇವರೆಲ್ಲರಿಗಿಂತಲೂ ನಟ ದರ್ಶನ್ ಪ್ರಭಾವಿ ಇದ್ದಾರ? ಮಾಧ್ಯಮಗಳು ನಮ್ಮನ್ನು ಗಮನಿಸುತ್ತಿವೆ ಎನ್ನುವ ಕಾರಣಕ್ಕೊ, ತನಿಖಾಧಿಕಾರಿಗಳ ಪರ ಇರುವ ವಕೀಲರು ಹಾಗೂ ಆರೋಪಿಗಳ ಪರ ಇರುವ ವಕೀಲರ ನಡುವಿನ ಪ್ರತಿಷ್ಠೆ ಎನ್ನುವ ಕಾರಣಕ್ಕೆ ಇಲ್ಲಿ ದರ್ಶನ್ ಬಲಿಪಶುವಾಗುತ್ತಾರ ಎನ್ನುವ ಪ್ರಶ್ನೆ ಮೂಡಿದೆ.

WhatsApp Group Join Now
Telegram Group Join Now
Share This Article