ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಸಂಸತ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವಾಗ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಎನ್ನುವುದು ಫ್ಯಾಷನ್ ಆಗಿದೆ. ಇಷ್ಟು ಬಾರಿ ದೇವರ ಹೆಸರು ಜಪಿಸಿದ್ದರೆ ಏಳು ಜನ್ಮದಲ್ಲಿ ಸ್ವರ್ಗ ಸಿಗುತ್ತಿತ್ತು ಎಂದಿದ್ದರು. ಇದು ವಿಪಕ್ಷಗಳು ಸೇರಿದಂತೆ ದೇಶ್ಯಾದ್ಯಂತ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಗುರುವಾರ ಸುವರ್ಣಸೌಧದಲ್ಲಿ ಆಡಳಿತ ಪಕ್ಷದ ಸದಸ್ಯರ ಆಸನಗಳ ಮುಂದೆ ಅಂಬೇಡ್ಕರ್ ಫೋಟೋ ಇಟ್ಟು ಪ್ರತ್ಯುತ್ತರ ನೀಡಲಾಗಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ, ದೇವರ ನಾಮವನ್ನು ಸ್ಮರಿಸುವುದರಿಂದ ಏಳು ಜನ್ಮದಲ್ಲಿ ಸ್ವರ್ಗ ಸಿಗುವುದಿಲ್ಲ ಎಂಬ ಗ್ಯಾರೆಂಟಿಯನ್ನು ನಾನು ನಿಮಗೆ ನೀಡುತ್ತೇನೆ. ಆದರೆ, ಅಂಬೇಡ್ಕರ್ ಹೆಸರು ಹೇಳುವುದರಿಂದ ಈ ಜನ್ಮದಲ್ಲಿ ವಂಚಿತ ವರ್ಗಗಳು ಆರ್ಥಿ, ಸಾಮಾಜಿಕ, ರಾಜಕೀಯ ಉನ್ನತಿಕಂಡು ಗೌರವದ ಜೀವನ ಹೊಂದಲು ಸಾಧ್ಯ. ಈ ಫ್ಯಾಷನ್ ನಿಂದ ನಿಮಗೆ ಏನಾದರೂ ತೊಂದರೆಯೇ ಎಂದು ಪ್ರಶ್ನಿಸಿದ್ದಾರೆ.