ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಒಳ ಮಿಸಲಾತಿ ವರ್ಗೀಕರಣದ ಕುರಿತು ನ್ಯಾ.ಎ.ಜೆ.ಸದಾಶಿವ ವರದಿಯ ವಿಷಯವಾಗಿ ಮಾದಿಗ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತಬೇಕೆಂದು ಶಾಸಕ ಅಶೋಕ ಮನಗೂಳಿ ಅವರಿಗೆ ಮಾದಿಗ ಸಮುದಾಯದ ಮುಖಂಡರು ಮನವಿ ಸಲ್ಲಿಸಲಾಗಿದೆ ಎಂದು ಕರ್ನಾಟಕ ಮಾದಿಗರ ಸಂಘ, ತಾಲೂಕ ಶಾಖೆಯ ಅಧ್ಯಕ್ಷರಾದ ಯಲ್ಲು ಇಂಗಳಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಈ ವೇಳೆ ಸಮಾಜದ ಮುಖಂಡ ಸಾಯಬಣ್ಣ ಪುರದಾಳ ಮಾತನಾಡಿ, ಸತತ ಮೂರು ದಶಕಗಳಿಂದ ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ಆಗ್ರಹಿಸಿ ಹೋರಾಟ ಮಾಡುತ್ತಾ ಬಂದಿದ್ದು. ಆಯಾ ರಾಜ್ಯಕ್ಕೆ ಒಳಮೀಸಲಾತಿ ನೀಡುವ ಅಧಿಕಾರವಿದೆ ಸುಪ್ರೀಂ ಕೋರ್ಟ್ ಆಗಸ್ಟ್ 1, 2024ರಂದು ತೀರ್ಪು ನೀಡಿದೆ. ಆದರೆ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಲು ನ್ಯಾ.ಎಚ್.ಎನ್.ನಾಗಮೋಹನದಾಸ ಅವರ ಏಕಸದಸ್ಯ ಪೀಠ ರಚಿಸಿದ್ದು ಬಿಟ್ಟರೆ ಏನನ್ನು ಮಾಡಿಲ್ಲ. ಪೀಠ ರಚನೆ ಮಾಡಿ ಸುಮಾರು 45 ದಿನಗಳ ಕಳೆದರು ಆಯೋಗ ಯಾವುದೇ ಕೆಲಸ ಮಾಡಿಲ್ಲ ಎಂದು ಹೇಳಿದರು.
ಶಾಸಕರಾದ ತಾವು ಮೀಸಲಾತಿ ವಿಷಯವನ್ನು ಅಧಿವೇಶನದಲ್ಲಿ ಚರ್ಚಿಸಿ ಅಂಗೀಕಾರಗೊಳಿಸುವಂತೆ ಶಾಸಕರಾದ ಅಶೋಕ ಮನಗೂಳಿ ಅವರಿಗೆ ಮಾದಿಗ ಸಮುದಾಯದ ಎಲ್ಲ ಮುಖಂಡರು ಮನವಿ ಸಲ್ಲಿಸಿದರು. ಈ ವೇಳೆ ಸಮುದಾಯದ ಮುಖಂಡರಾದ ಶರಣಪ್ಪ ಬೂದಿಹಾಳ, ಪ್ರಧಾನಿ ಮೂಲಿಮನಿ, ನಾಗು ಕಟ್ಟಿಮನಿ, ಖಾಜು ಬಂಕಲಗಿ, ಸಿದ್ದು ಪೂಜಾರಿ, ಹಣಮಂತ ವರ್ಕಾನಳ್ಳಿ, ಜಟ್ಟು ಶಿರಸಗಿ, ರವಿ ಕಲಹಳ್ಳಿ, ಸಿದ್ದು ಯಂಕಂಚಿ, ಸುರೇಶ ಕಟ್ಟಿಮನಿ, ಜೆ.ವೈ.ಹೊಸಮನಿ, ಪರಸು ಗೊರಗುಂಡಗಿ, ಭೀಮಾಶಂಕರ ರತ್ನಾಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.