ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ನಗರದ ಹಕೀಮ ಚೌಕ್ ಹತ್ತಿರದ ಪಾಶ್ಚಾಪುರ ಪೇಠ ನಿವಾಸಿಯಾದ 33 ವರ್ಷದ ರೇಖಾ ಭೀಮಾಶಂಕರ ಕುಮಟಗಿ ಎಂಬ ಮಹಿಳೆ ಅಕ್ಟೋಬರ್ 3, 2025ರಂದು ಕಾಣೆಯಾಗಿದ್ದಾರೆ. ಈ ಸಂಬಂಧ ಗೋಲ್ ಗುಮ್ಮಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಮಹಿಳೆಯು ಸಾಧಾರಣ ಮೈಕಟ್ಟು, ದುಂಡುಮುಖ, ನೆಟ್ಟನೆಯ ಮೂಗು, ಸಾದಾಗಪ್ಪು ಮೈ ಬಣ್ಣ ಹೊಂದಿದ್ದಾಳೆ. 5.4 ಅಡಿ ಎತ್ತರವಿದ್ದು, ಕನ್ನಡ ಮತ್ತು ವಡ್ಡರ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಸಂದರ್ಭದಲ್ಲಿ ಕಪ್ಪು ಮಿಶ್ರಿತ ಚಾಕಲೇಟ್ ಬಣ್ಣದ ನೈಟಿ ಧರಿಸಿದ್ದು, ಈ ಚಹರೆಪಟ್ಟಿಯುಳ್ಳ ಮಹಿಳೆ ಪತ್ತೆಯಾದಲ್ಲಿ ಸಾರ್ವಜನಿಕರು ಪೊಲಿಸ್ ಕಂಟ್ರೋಲ್ ರೂಮ್ ಗೆ 08352-250214 ಅಥವಾ ಗೋಲ್ ಗುಂಬಜ್ ಪೊಲಿಸ್ ಠಾಣೆಗೆ ಮಾಹಿತಿ ಒದಗಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.