ಪ್ರಜಾಸ್ತ್ರ ಸುದ್ದಿ
ಕೊಪ್ಪಳ(Koppala): ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ನಸುಕಿನಜಾವದಲ್ಲಿ ಭರ್ಜರಿ(Heavy Rain) ಮಳೆಯಾಗಿದೆ. ಹೀಗಾಗಿ ಕೆಲವು ಕಡೆ ಅನಾಹುತಗಳು ಸೃಷ್ಟಿಯಾಗಿವೆ. ಹೀಗೆ ಸುರಿದ ಮಳೆಯಿಂದಾಗಿ ಮನೆಯೊಂದು ಕುಸಿದಬಿದ್ದು, ವ್ಯಕ್ತಿಯೊಬ್ಬ ಮಣ್ಣಿನಡಿ ಸಿಲುಕಿದ್ದ ಘಟನೆ ಗಂಗಾವತಿ ತಾಲೂಕಿನ ಢಾಣಾಪುರ ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದಿದೆ. ತಕ್ಷಣ ಗ್ರಾಮಸ್ಥರು ಆತನನ್ನು ರಕ್ಷಿಸಿದ್ದಾರೆ.
ಈ ಮನೆಯಲ್ಲಿ ಅಕ್ಕ ಹಾಗೂ ತಮ್ಮ ವಾಸವಾಗಿದ್ದರು. ಅಕ್ಕ ಹೊರಗಡೆ ಕೆಲಸ ಮಾಡುತ್ತಿದ್ದರು. ಸಹೋದರ ಪ್ರಕಾಶ್(45) ಚಾರ್ಜ್ ಗೆ ಇಟ್ಟಿದ್ದ ಫೋನ್ ತರಲು ಒಳಗೆ ಹೋದಾಗ ಮನೆ(Home Collapse) ಕುಸಿದು ಅವರ ಮೇಲೆ ಬಿದ್ದಿದೆ. ಹೀಗಾಗಿ ಬೆನ್ನು ಹಾಗೂ ಕಾಲಿಗೆ ತೀವ್ರ ಪೆಟ್ಟಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಎರಡು ದಿನಗಳಿಂದ ಗಂಗಾವತಿ ತಾಲೂಕಿನಾದ್ಯಂತ ಭರ್ಜರಿ ಮಳೆಯಾಗುತ್ತಿದೆ.