ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಇರಾನ್ ಪರಮಾಣು ಘಟಕಗಳ ಮೇಲೆ ಯುಎಸ್ ದಾಳಿ ಮಾಡಿದೆ. ಇದಕ್ಕೆ ತಕ್ಕ ಪ್ರತಿಕಾರ ನೀಡಲಾಗುವುದು. ದಾಳಿಯ ಸಮಯ, ಸ್ವರೂಪ ನಿರ್ಧರಿಸಲಾಗುವುದು ಎಂದು ಇಸ್ಲಾಮಿಕ್ ರಿಪಬ್ಲಿಕ್ ದೇಶದ ಪರಮೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹೇಳಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಇರಾನ್ ಮೇಲೆ ದಾಳಿ ನಡೆಸಿ ಜಿಯೋನಿಸ್ಟ್ ದೊಡ್ಡ ತಪ್ಪು ಮಾಡಿದೆ ಎಂದಿದ್ದಾರೆ.
ಇರಾನ್-ಇಸ್ರೇಲ್ ಸಘರ್ಷದ ನಡುವೆ ಯುಎಸ್ ನೇರವಾಗಿ ಮಧ್ಯಪ್ರವೇಶ ಮಾಡಿದೆ. ಇರಾನ್ ನ ನಟಾನ್ಜ್, ಫೋರ್ಡೊ ಮತ್ತು ಎಸ್ ಫಹಾನ್ ನಲ್ಲಿರುವ ಪರಮಾಣು ಘಟಕಗಳ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲಾಗುವುದು ಎಂದು ಇರಾನ್ ನಾಯಕರು ಹೇಳಿದ್ದು, ಈಗ ಖಮೇನಿ ಸಹ ಎಕ್ಸ್ ನಲ್ಲಿ ಪೋಸ್ಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.