ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಧ್ಯದಲ್ಲಿ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿರುವುದು ಹನಿಟ್ರ್ಯಾಪ್. ಇದು ರಾಷ್ಟ್ರೀಯ ಮಟ್ಟದ ತನಕ ಹೋಗಿದೆ. ಎಲ್ಲೆಡೆ ಸಾಕಷ್ಟು ಚರ್ಚೆಯಾಗುತ್ತಿದೆ. ಅಧಿವೇಶನದ ವೇಳೆ ಕಲಾಪದಲ್ಲಿ ಚೀಟಿ ಬರೆದಿದ್ದನ್ನು ಹೇಳಿದರೆ ಎರಡೂ ಪಕ್ಷದಲ್ಲಿ ದೊಡ್ಡ ಕ್ರಾಂತಿಯಾಗಲಿದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ.
ಆ ಚೀಟಿ ಕಳಿಸಿದ್ದು ಯಾರು, ಆ ಚೀಟಿಯಲ್ಲಿರುವ ವಿಷಯ ಹೇಳಿದರೆ ಎರಡೂ ಪಕ್ಷಗಳ ಮಹಾನಾಯಕರು ಮನೆಗೆ ಹೋಗುತ್ತೆ. ಹೀಗಾಗಿ ಮುಂದಿನ ದಿನಗಳಲ್ಲಿ ಚೀಟಿಯಲ್ಲಿ ಬರೆದಿದ್ದೇನೆ. ಸದನದಲ್ಲಿ ಸಚಿವ ಕೆ.ಎನ್ ರಾಜಣ್ಣ ಹನಿಟ್ರ್ಯಾಪ್ ಹೇಳಿದರೂ ಯಾರೂ ಹೆಸರನ್ನು ಪ್ರಸ್ತಾಪಿಸಿಲ್ಲ. ಅವರು ಹೇಳಿರುವುದು ನೋಡಿದರೆ ಅವರದೆ ಪಕ್ಷದ ಮಂತ್ರಿಯೊಬ್ಬರು ಭಾಗಿಯಾಗಿರುವಂತಿದೆ. ಆದರೆ, ಯಾರಿಂದ ಬ್ಲ್ಯಾಕ್ ಮೇಲ್ ನಡೆದಿದೆ ರಾಜ್ಯದ ಜನರಿಗೆ ತಿಳಿಯಬೇಕಿದೆ.