ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ದೈನಿಕ್ ಜಾಗರಣ್ ಪ್ರಕಾರ, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮುಂದಿನ ಚುನಾವಣೆ ನಡೆಯುವ ತನಕ ಹಂಗಾಮಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಲಿದ್ದಾರೆ. ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆ ಬುಧವಾರ ರಾಜೀವ್ ಶುಕ್ಲಾ ನೇತೃತ್ವದಲ್ಲಿ ನಡೆದಿದೆ.
ಈ ವೇಳೆ ಪ್ರಾಯೋಜಕತ್ವದ ಕುರಿತು ಚರ್ಚೆಗಳು ನಡೆದಿವೆ. ಡ್ರೀಮ್ 11 ಪ್ರಾಯೋಜಕತ್ವವನ್ನು ಕೊನೆಗೊಳಿಸುವುದು. ಮುಂದಿನ ಎರಡೂವರೆ ವರ್ಷಕ್ಕೆ ಹೊಸ ಪ್ರಾಯೋಜಕರನ್ನು ಹುಡುಕುವುದು. ಜೊತೆಗೆ ಸೆಪ್ಟೆಂಬರ್ 10ರಿಂದ ಏಷ್ಯಕಪ್ ಟೂರ್ನಿ ಶುರುವಾಗುತ್ತಿದ್ದು, ಬದಲಿ ಆಟಗಾರರ ಆಯ್ಕೆ ಪ್ರಕ್ರಿಯೆ ಸಹ ನಡೆಯಬೇಕಿದೆ.