ಕುಖ್ಯಾತ ರೌಡಿ ಚೈಲ್ಡ್ ರವಿ ಹತ್ಯೆ

154

ಪ್ರಜಾಸ್ತ್ರ ಅಪರಾಧ ಸುದ್ದಿ

ಹಾಸನ: ಕುಖ್ಯಾತ ರೌಡಿ ಚೈಲ್ಡ್ ರವಿಯನ್ನು(45) ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆ ಮಾಡಲಾಗಿದೆ. ಬುಧವಾರ ಮುಂಜಾನೆ ಹೇಮಾವತಿ ನಗರದಲ್ಲಿ ಈ ಘಟನೆ ನಡೆದಿದೆ.

ಬೈಕ್ ಮೇಲೆ ಕುಡಿಯುವ ನೀರು ತೆಗೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ದಾಳಿ ಮಾಡಲಾಗಿದೆ. ಹೀಗಾಗಿ ತಪ್ಪಿಸಿಕೊಳ್ಳಲು ಆಗದೆ ಸಿಕ್ಕುಬಿದ್ದು ಕೊಲೆಯಾಗಿ ಹೋಗಿದ್ದಾನೆ. ಇತ ಸಹ ಕೊಲೆ, ಸುಲಿಗೆ, ದರೋಡೆ ಪ್ರಕರಣದಲ್ಲಿ ತೊಡಗಿದ್ದ. ಪೆನ್ ಷನ್ ಮೊಹಲ್ಲಾ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
error: Content is protected !!