ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರೌಡಿಶೀಟರ್ ನೇಪಾಳಿ ಮಂಜನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆ ಮಾಡಿದ ಘಟನೆ ಆನೇಕಲ್ ತಾಲೂಕಿನ ಹೆಬ್ಬುಗೋಡಿಯ ಗೊಲ್ಲರಹಳ್ಳಿಯ ಮುಖ್ಯರಸ್ತೆಯಲ್ಲಿ ನಡೆದಿದೆ. ಸ್ನೇಹಿಕತರು ಕರೆದರು ಎಂದು ಕುಣಿಗಲ್ ನಿಂದ ಬೆಂಗಳೂರಿಗೆ ಹಬ್ಬದಂದು ಬಂದಿದ್ದಾನೆ. ಕುಟುಂಬ ಸಮೇತ ಇತ್ತೀಚೆಗಷ್ಟೇ ಕುಣಿಗಲ್ ಗೆ ಶಿಫ್ಟ್ ಆಗಿದ್ದ. ಸ್ನೇಹಿತರಿಬ್ಬರ ಜೊತೆಗೆ ಗೊಲ್ಲರಹಳ್ಳಿಯ ಹತ್ತಿರದ ನಿರ್ಜನ ಪ್ರದೇಶದಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಆಗ ಎರಡು ಬೈಕ್ ನಲ್ಲಿ ಐವರ ಗ್ಯಾಂಗ್ ಬಂದಿದೆ.
ಐವರ ಗ್ಯಾಂಗ್ ಮಚ್ಚು, ಲಾಂಗ್ ಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದೆ. ನೇಪಾಳಿ ಮಂಜನ ಮೇಲೆ ಕೊಲೆ, ಕೊಲೆ ಯತ್ನ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣಗಳಿದ್ದವು. ಕುಟುಂಬದ ಜೊತೆಗೆ ಚೆನ್ನಾಗಿದ್ದು ರೌಡಿಸಂ ಎಲ್ಲ ಬಿಟ್ಟು ಬದುಕುವಂತೆ ಪೊಲೀಸರು ಹೇಳಿದ್ದರು. ಆದರೆ, ಇದೀಗ ಆತನೇ ಕೊಲೆಯಾಗಿ ಹೋಗಿದ್ದಾನೆ. ಹೆಬ್ಬುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.