ಪ್ರಜಾಸ್ತ್ರ ಸುದ್ದಿ
ಬೀದರ(Bidara): ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ತುಂಬಾ ವೈರಲ್ ಆಗಿತ್ತು. ಬೀದರ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ ಅವರೊಂದಿಗೆ ಆರ್ ಟಿಒ ಇನ್ಸಪೆಕ್ಟರ್ ವಾಗ್ವಾದ ನಡೆಸಿರುವುದು. ಇದೀಗ ಆರ್ ಟಿಒ ಇನ್ಸ್ ಪೆಕ್ಟರ್ ಮಂಜುನಾಥ ಕೊರವಿ ಅವರನ್ನು ಅಮಾನತು ಮಾಡಲಾಗಿದೆ. ಘಟನೆ ಬಳಿಕ ಅವರನ್ನು ಸಾರಿಗೆ ಇಲಾಖೆಯ ಖಾಗದ ಪತ್ರಗಳ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. ಶಾಸಕರು ಸರ್ಕಾರಕ್ಕೆ ಹಕ್ಕುಚ್ಯುತಿ ದೂರು ಸಲ್ಲಿಸಿದ್ದರು. ಹೀಗಾಗಿ ಸರ್ಕಾರ ಅಮಾನತುಗೊಳಿಸಿದೆ.
ಕಳೆದ ನವೆಂಬರ್ 29ರ ರಾತ್ರಿ ಸುಮಾರು 10 ಗಂಟೆಯ ಸುಮಾರಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಭಾಲ್ಕಿ ಮೂಲಕ ಶಾಸಕ ಬೆಲ್ದಾಳೆ ಹೊರಟಿದ್ದರು. ನೌಬಾದ್-ಲಾಲ್ ಬಾಗ್ ಹತ್ತಿರ ಎರಡು ಕಡೆಯ ವಾಹನಗಳನ್ನು ತಡೆದು ನಿಲ್ಲಿಸಲಾಗಿತ್ತು. ಇದನ್ನು ನೋಡಿ ಆರ್ ಟಿಇ ಇನ್ಸ್ ಪೆಕ್ಟರ್ ಕೊರವಿ ಬಳಿ ಹೋಗಿ ಬೇಗ ಬೇಗ ಪರಿಶೀಲನೆ ಮಾಡಿ ಕಳಿಸಿ. ಹೆಲ್ಮೆಟ್ ಇದ್ದರೂ ಬೈಕ್ ಗಳನ್ನು ಯಾಕೆ ತಡೆದಿದ್ದರು. ಹೆಣ್ಮಕ್ಕಳು, ಮಕ್ಕಳು ಇವೆ. ಇಷ್ಟೊತ್ತಲ್ಲಿ ಜನರಿಗೆ ತೊಂದರೆ ಕೊಡಬೇಡಿ ಎಂದು ಹೇಳಿದ್ದಾರೆ. ಇದು ಇಬ್ಬರ ನಡುವೆ ಮಾತು ಬೆಳೆದಿದೆ. ನಿಮ್ಮಂತವರನ್ನು ಎಲ್ಲೆಡೆ ನೋಡಿದ್ದೇನೆ. ನೀವು ಎಂಎಲ್ಎ ಎಂದು ನನಗೆ ಗೊತ್ತಿಲ್ಲ. ನಿಮ್ಮನ್ನು ಫಸ್ಟ್ ಟೈಂ ನೋಡ್ತಿದೀನಿ ಎಂದು ಚಿಟಿಕಿ ಹೊಡೆದು ಮಾತನಾಡಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.