ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಕ್ರಿಕೆಟ್ ಅಂಗಳದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತಂಡೂಲ್ಕರ್(sachin tendulkar) ಅವರ ದಾಖಲೆಯನ್ನು ದೆಹಲಿಯ ಕಂಪ್ಯೂಟರ್ ಶಿಕ್ಷಕ ಮುರಿದಿದ್ದಾರೆ. ಅಲ್ಲದೆ ತಮ್ಮ ನೆಚ್ಚಿನ ಆಟಗಾರ ಸಚಿನ್ ಅವರ ಕೈಯಿಂದಲೇ ದಾಖಲೆಯ ಪ್ರಶಸ್ತಿ ಪಡೆದಿದ್ದಾರೆ. ಅವರೆ ವಿನೋದ್ ಕುಮಾರ್(Vinod Kumar Chaudhary) ಚೌಧರಿ. ಇವರು 20 ಗಿನ್ನಿಸ್ ದಾಖಲೆಗಳನ್ನು ಮಾಡುವ ಮೂಲಕ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ವಿಶ್ವ ಕ್ರಿಕೆಟ್ ಲೋಕದ ದಂತಕಥೆ ಸಚಿನ್ ಅವರ ದಾಖಲೆ ಬ್ರೇಕ್ ಮಾಡಿದ್ದಾರೆ.
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವೇಗವಾಗಿ ಟೈಪ್ ಮಾಡುವ, ಮೌತ್ ಸ್ಟಿಕ್, ಮೂಗಿನ ಮೂಲಕ, ಕ್ರಿಕೆಟ್ ಹ್ಯಾಂಡ್ ಗ್ಲೌಸ್ ಧರಿಸಿ ಹಿಮ್ಮುಕವಾಗಿ ಟೈಪ್ ಮಾಡುವುದು ಸೇರಿದಂತೆ 20 ಗಿನ್ನಿಸ್ ದಾಖಲೆಗಳನ್ನು ಮಾಡಿದ್ದಾರೆ. ಸಚಿನ್ ಹೆಸರಿನಲ್ಲಿ 19 ದಾಖಲೆಗಳಿವೆ. ಅತಿ ಹೆಚ್ಚು ಕ್ರಿಕೆಟ್ ಪಂದ್ಯವಾಡಿರುವುದು, ಅತಿ ಹೆಚ್ಚು ರನ್, ಅತಿ ಹೆಚ್ಚು ಶತಕ ಹೀಗೆ 19 ದಾಖಲೆಗಳಿವೆ. ಬಾಲ್ಯದಿಂದ ಅಥ್ಲಟಿಕ್ ಆಗಿ ಒಲಿಂಪಿಕ್ಸ್ ನಲ್ಲಿ ಆಡಬೇಕು ಎನ್ನುವ ಆಸೆಯನ್ನು ವಿನೋದ್ ಕುಮಾರ್ ಚೌಧರಿ ಹೊಂದಿದ್ದರಂತೆ. ಆದರೆ, ಬಡತನದಿಂದ ಅವರ ಕನಸು ನನಸಾಗಲಿಲ್ಲ.
43 ವರ್ಷದ ಚೌಧರಿ ದೆಹಲಿ ಜವಾಹರಲಾಲ್ ನೆಹರು(JNU) ವಿಶ್ವವಿದ್ಯಾಲಯದಲ್ಲಿ ನೌಕರಿ ಮಾಡುತ್ತಿದ್ದರು. ಈಗ ಕಂಪ್ಯೂಟರ್ ತರಬೇತುದಾರರಾಗಿದ್ದಾರೆ. ಈಗ ಇವರ ಟೈಪಿಂಗ್ ಮ್ಯಾನ್ ಆಫ್ ಇಂಡಿಯಾ ಆಗಿದ್ದಾರೆ. ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಲೇ ರಾತ್ರಿ ಟೈಪಿಂಗ್ ಕಲಿತು 20 ಗಿನ್ನಿಸ್(Guinness World Records) ರೆಕಾರ್ಡ್ ಗಳ ಸರದಾರರಾಗಿದ್ದಾರೆ.