ಪ್ರಜಾಸ್ತ್ರ ಸುದ್ದಿ
ಹಾವೇರಿ(Haveri): ರಾಜ್ಯ ಸರ್ಕಾರದ ಸಧನಾ ಸಮಾವೇಶ ಹಾಗೂ ಭೂ ಗ್ಯಾರೆಂಟಿ ಲೋಕಾರ್ಪಣೆಯ ಕಾರ್ಯಕ್ರಮವನ್ನು ಫೆಬ್ರವರಿ 14ರಂದು ನಗರದಲ್ಲಿ ಆಯೋಜಿಸಲಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿದೆ. ಹೀಗಾಗಿ ಬೃಹತ್ ಪೆಂಡಾಲ್ ಹಾಕಲಾಗಿದೆ. ಆದರೆ, ಕೆಳದ ಎರಡು ದಿನಗಳಲ್ಲಿ ಎರಡು ಬಾರಿ ಪೆಂಡಾಳ್ ಕಳಚಿ ಬಿದ್ದಿದೆ.
ಇಂದು(ಶುಕ್ರವಾರ) ಎಸ್ಪಿ ಯಶೋಧಾ ವಂಟಗೋಡಿ ಅವರು ನಿಯೋಜನೆಗೊಂಡಿರುವ ಪೊಲೀಸರ ಹಾಜರಾತಿ ಹಾಗೂ ಭದ್ರತಾ ಸೂಚನೆಗಳನ್ನು ನೀಡಿ ಹೋಗಿದ್ದರು. ಈ ವೇಳೆ ಕೆಲ ಪೊಲೀಸರು ಉಳಿದುಕೊಂಡಿದ್ದು, ಪೆಂಡಾಲ್ ಕಳಿಚಿ ಬಿದ್ದಿದೆ. ಕಬ್ಬಿಣದ ಕಂಬಗಳು ಕುರ್ಚಿಗಳನ್ನು ಸೀಳಿ ಸಿಕ್ಕು ಹಾಕಿಕೊಂಡಿವೆ. ಗುರುವಾರ ಸಹ ಪೆಂಡಾಲ್ ಬಿದ್ದು ಸುದ್ದಿವಾಹಿನಿಯೊಂದರ ಕ್ಯಾಮೆರಾಮನ್ ಗಾಯಗೊಂಡಿದ್ದಾರೆ. ಶನಿವಾರ ಅಪಾರ ಸಂಖ್ಯೆಯಲ್ಲಿ ಜನ ಸೇರಲಿದ್ದು, ಏನಾಗುತ್ತೋ ಅನ್ನೋ ಆತಂಕ ಮೂಡಿದೆ. ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.




