ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ(Chitradurga): ಸಾಧುಗಳ ವೇಷದಲ್ಲಿ ಬಂದು ರೈತನ ಚಿನ್ನದ ಉಂಗುರು ಕಳ್ಳತನ ಮಾಡಿದ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದೆ. ತಾಲೂಕಿನ ಚಿಕ್ಕಗೊಂಡನಹಳ್ಳಿ ಗ್ರಾಮದ ಹತ್ತಿರ ಈ ಘಟನೆ ನಡೆದಿದ್ದು, ತುರುವನೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 50ರ ಹತ್ತಿರ ಇರುವ ರೈತ ರವಿಕುಮಾರ ಅವರ ಜಮೀನಿಗೆ ಬಂದು ಕಳ್ಳತನ ಮಾಡಿದ್ದಾರೆ.
ಮೆಕ್ಕೆಜೋಳ ಚೆನ್ನಾಗಿದೆ. ಒಂದೆರಡು ತೆಗೆದುಕೊಳ್ಳುತ್ತೇವೆ ಎಂದು ಹೇಳಿ ಮುರಿದುಕೊಂಡಿದ್ದಾರೆ. ಬಳಿಕ ಭವಿಷ್ಯ ಹೇಳುತ್ತೇವೆ ಎಂದು ಕಾರಿನಲ್ಲಿ ಹತ್ತಿಸಿಕೊಂಡಿದ್ದಾರೆ. ಕೈಯಲ್ಲಿನ ಉಂಗುರು ಕಿತ್ತುಕೊಂಡು ಕಾರಿನಿಂದ ಕೆಳಗಿಳಿಸಿ ಪರಾರಿಯಾಗಿದ್ದಾರೆ. ರೈತ ರವಿಕುಮಾರ್ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಕಾರು ಚಾಲಕ ಸೇರಿ ಐವರು ನಕಲಿ ಸಾಧುಗಳನ್ನು ಬಂಧಿಸಿದ್ದಾರೆ.