ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಐತಿಹಾಸಿಕ ಮೈಸೂರು(Dasara) ದಸರಾಗೆ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಚಾಲನೆ ನೀಡಿದರು. ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಉತ್ಸವಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನವರಾತ್ರಿಯ ಉತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರಾದ ಹೆಚ್.ಸಿ ಮಹಾದೇವಪ್ಪ, ಕೆ.ಹೆಚ್.ಮುನಿಯಪ್ಪ, ಹೆಚ್.ಕೆ ಪಾಟೀಲ, ಶಿವರಾಜ ತಂಗಡಗಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ದಸರಾ ಮತ ಧರ್ಮಗಳ ತಾರತಮ್ಯವಿಲ್ಲದ ಸರ್ವಜನಾಂಗದ ಹಬ್ಬ. ಇಲ್ಲಿ ಆಸ್ತಿಕತೆ, ನಾಸ್ತಿಕತೆ ಅಪ್ರಸ್ತುತ. ಇದು ಅರಮನೆಯ ಹಬ್ಬವಲ್ಲ. ಜನರು ಆಯ್ಕೆ ಮಾಡಿ ಕಳಿಸಿದ ಸರ್ಕಾರದ ಹಬ್ಬ. ಇನ್ನು ಯುವಕರು ಬರೀ ಮೋದಿ(Modi) ಮೋದಿ ಎಂದು ಹೇಳುತ್ತಾ ಹೋಗುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಸರ್ಕಾರವನ್ನು ಬೀಳಿಸುವ ಕೆಲಸ ಮಾಡಬಾರದು. ಯಾಕಂದರೆ ಐದು ವರ್ಷಗಳ ನಂತರ ಮತ್ತೆ ಅವಕಾಶ ಇರುತ್ತೆ. ಆಗ ಗೆದ್ದು ಬಂದು ಅಧಿಕಾರ ನಡೆಸಬಹುದು ಎಂದರು.