ಯೇಸು ಕ್ರಿಸ್ತನ ಹುಟ್ಟಿನ ಬಗ್ಗೆ ಪ್ರಶ್ನಿಸಿದ ಸಾಹಿತಿ ಎಸ್.ಎಲ್ ಭೈರಪ್ಪ

Nagesh Talawar
ಯೇಸು ಕ್ರಿಸ್ತನ ಹುಟ್ಟಿನ ಬಗ್ಗೆ ಪ್ರಶ್ನಿಸಿದ ಸಾಹಿತಿ ಎಸ್.ಎಲ್ ಭೈರಪ್ಪ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಎಲ್ಲೆಡೆ ಇಂದು ಕ್ರೈಸ್ತ್ ಬಂಧುಗಳು ಸಂಭ್ರಮದಿಂದ ಕ್ರಿಸ್ಮಸ್(Christmas) ಹಬ್ಬವನ್ನು ಆಚರಿಸುತ್ತಿದ್ದಾರೆ. ಈ ಕುರಿತು ಖ್ಯಾತ ಸಾಹಿತಿ ಎಸ್.ಎಲ್ ಭೈರಪ್ಪ ಎಕ್ಸ್ ನಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದಾರೆ. ಜೀವಶಾಸ್ತ್ರ ಇಷ್ಟೊಂದು ಮುಂದುವರೆದಿರುವ ಈ ಕಾಲದಲ್ಲಿಯೂ ನೀವು ಕ್ರಿಸ್ತನು ಕುಮಾರಿಯ ಹೊಟ್ಟೆಯಲ್ಲಿ ಹುಟ್ಟಿದನೆಂದು ಹೇಗೆ ನಂಬುವಿರಿ? ಶುದ್ಧ ಜ್ಞಾನದ ದೃಷ್ಟಿಯಿಂದ ನೋಡಿದರೆ ಮೂಢ ನಂಬಿಕೆಗಳೂ ಅಂಧ ನಂಬಿಕೆಗಳೂ ಬೈಬಲ್ ನಲ್ಲಿ ಲೆಕ್ಕವಿಲ್ಲದಷ್ಟಿವೆ. ಸತ್ಯ ಧರ್ಮಶ್ರೀ ಎಂದು ಬರೆದಿದ್ದಾರೆ.

ಇದಕ್ಕೆ ಅನೇಕರು ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಇದೆಲ್ಲವನ್ನು ಮೂಢ ನಂಬಿಕೆ ಅಲ್ಲವೆ ಎಂದು, ಮಡಕೆಯಿಂದ ಕೌರವರು, ಮಂತ್ರದಿಂದ ಪಾಂಡವರು, ಸಲಿಂಗ ಕಾಮದಿಂದ ಅಯ್ಯಪ್ಪ, ಸಲಿಂಗ ರತಿಯಿಂದ ಭಗೀರಥ.. ಕರ್ಣ ಹುಟ್ಟಿದ್ದು ಹೇಗೆ ಎಂದು ಕೇಳುವ ಮೂಲಕ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ. 1961ರಲ್ಲಿ ಧರ್ಮಶ್ರೀ ಎನ್ನುವ ಇವರ ಕೃತಿಯಲ್ಲಿ ಮತಾಂತರ ವಿಚಾರದ ಕುರಿತು ಹೇಳಲಾಗಿದೆ. ಬಲಪಂಥೀಯ ಬರಹಗಾರರಾಗಿ ಇವರು ಗುರುತಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article