ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಪಿಕಪ್ ವಾಹನದಲ್ಲಿ ಈರುಳ್ಳಿ ಮೂಟೆ ಕೆಳಗೆ ಶ್ರೀಗಂಧ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದ್ದು, ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಆಂಧ್ರದ ಕರ್ನೂಲ್ ನಿಂದ ಬೆಂಗಳೂರಿಗೆ 1 ಕೋಟಿಗೂ ಹೆಚ್ಚು ಮೌಲ್ಯದ 750 ಕೆಜಿ ಶ್ರೀಗಂಧವನ್ನು ಕಳ್ಳ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ಬೆಂಗಳೂರಿನ ಡೀಲರ್ ವೊಬ್ಬರಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗಲಾಗುತ್ತಿತ್ತು.
ಪಿಕಪ್ ವಾಹನದಲ್ಲಿ 18 ಈರುಳ್ಳಿ ಚೀಲಗಳನ್ನು ಇಡಲಾಗಿದೆ. ಅದರ ಕೆಳಗೆ ಶ್ರೀಗಂಧ ಮರದ ತುಂಡುಗಳನ್ನು ಇಡಲಾಗಿತ್ತು. ಶೇಖ್ ಶಾರುಖ್, ಶೇಖ್ ಅಬ್ದುಲ್ ಕಲಾಂ, ಪರಮೇಶ್, ರಾಮ್ ಗೋಪಾಲ್ ಅನ್ನೋ ನಾಲ್ವರನ್ನು ಬಂಧಿಸಿದ್ದಾರೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.




