ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕರ್ನಾಟಕ ಸಂಗೀತ, ನೃತ್ಯ(Karnataka Sangeetha Nrutya Academy) ಅಕಾಡೆಮಿ ನೀಡುವ ಕರ್ನಾಟಕ ಕಲಾಶ್ರೀ ಪ್ರಶಸ್ತಿಯ 2024-25ನೇ ಸಾಲಿನಲ್ಲಿ ನೀಡಲಾದ ಸಾಧಕರ ಪಟ್ಟಿ ಪ್ರಕಟಿಸಲಾಗಿದೆ. ಇದರಲ್ಲಿ ಬೆಂಗಳೂರಿಗೆ ಸಿಂಹಪಾಲು ದಕ್ಕಿದೆ. ಕರ್ನಾಟಕ ಸಂಗೀತ ಗೌರವ ಪ್ರಶಸ್ತಿಗೆ ಗಾಯನದಲ್ಲಿ ಬೆಂಗಳೂರಿನ ಭಾನುಮತಿ ನರಸಿಂಹನ್, ನೃತ್ಯದಲ್ಲಿ ಹಾಸನದ ಗಾಯತ್ರಿ ಕೇಶವನ್ ಅವರಿಗೆ ನೀಡಲಾಗಿದೆ.
ಕರ್ನಾಟಕ ಸಂಗೀತ ವಾರ್ಷಿಕ ಪ್ರಶಸ್ತಿಯಲ್ಲಿ(Award) ಕೋಲಾರದ ವಾನರಾಶಿ ಬಾಲಕೃಷ್ಣ ಭಾಗವತ್, ಮೃದಂಗದಲ್ಲಿ ಬೆಂಗಳೂರಿನ ಎಸ್.ವಿ ಗಿರಿಧರ್, ಪಿಟೀಲುದಲ್ಲಿ ಆನೇಕಲ್ ನ ನಾಗಭೂಷಣಯ್ಯ, ಹಿಂದೂಸ್ಥಾನಿ ಸಂಗೀತದಲ್ಲಿ ಕಲಬುರಗಿಯ ಮಹಾದೇವಪ್ಪ ಪೂಜಾರ, ಹಾರ್ಮೋನಿಯಂದಲ್ಲಿ ಬೆಳಗಾವಿಯ ರವೀಂದ್ರ ಕಾಟೋಟಿ, ಗಾಯನದಲ್ಲಿ ಉತ್ತರ ಕನ್ನಡದ ಅನಂತ ಭಾಗವತ್, ನೃತ್ಯದಲ್ಲಿ ಬೆಳಗಾವಿಯ ಟಿ.ರವೀಂದ್ರ ಶರ್ಮಾ, ಬೆಂಗಳೂರಿನ ಅನುರಾಧಾ ವಿಕ್ರಾಂತ್, ಬೆಂಗಳೂರಿನ ಸುಗ್ಗನಹಳ್ಳಿ ಷಡಾಕ್ಷರಿ, ಬೆಂಗಳೂರಿನ ಬಿ.ಆರ್ ಹೇಮಂತ್ ಕುಮಾರ್(ನೃತ್ಯಕ್ಕೆ ಪಿಟೀಲು), ಸುಗಮ ಸಂಗೀತದಲ್ಲಿ ರಾಯಚೂರಿನ ಸೂಗೂರೇಶ ಅಸ್ಕಿಹಾಳ್, ಬೆಂಗಳೂರಿನ ಎನ್.ಎಲ್ ಶಿವಶಂಕರ್(ತಬಲಾ), ಕಥಾಕೀರ್ತನದಲ್ಲಿ ಕೋಲಾರದ ಕೆ.ಎನ್ ಕೃಷ್ಣಪ್ಪ, ಗಮಕದಲ್ಲಿ ಹಾಸನದ ರತ್ನಾಮೂರ್ತಿ, ಸಂಘ ಸಂಸ್ಥೆ ವಿಭಾಗದಲ್ಲಿ ಗದಗಿನ ವೀರೇಶ್ವರ ಪುಣ್ಯಾಶ್ರಮ, ಬೆಂಗಳೂರಿನ ಸುನಾದ ನಾದ ಕಲ್ಚರಲ್ ಸೆಂಟರ್ ಗೆ ಪ್ರಶಸ್ತಿ ಬಂದಿದೆ.