ಪ್ರಜಾಸ್ತ್ರ ಸುದ್ದಿ
ಡರ್ಬನ್: ಇಲ್ಲಿನ ಕಿಂಗ್ಸ್ ಮೇಡ್(Kingsmade) ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ(IND vs SA) ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ 203 ರನ್ ಗಳ ದೊಡ್ಡ ಗುರಿ ನೀಡಿತ್ತು. 17.5 ಓವರ್ ಗಳಲ್ಲಿ 141 ರನ್ ಗಳಿಗೆ ಸೌಥ್ ಆಫ್ರಿಕಾ ಆಲೌಟ್ ಆಗಿ 61 ರನ್ ಗಳ ಅಂತರದಿಂದ ಸೋಲು ಒಪ್ಪಿಕೊಂಡಿತು. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಫ್ರಿಕಾ ನಾಯಕ ಮಾರ್ಕ್ಂ ಪ್ಲಾನ್ ಉಲ್ಟಾ ಮಾಡಿದ್ದು ಸಂಜು ಸ್ಯಾಮ್ಸನ್.
ಯುವ ಆಟಗಾರ ಸಂಜು(Sanju Samson)ಸ್ಯಾಮ್ಸನ್ 10 ಸಿಕ್ಸ್, 7 ಫೋರ್ ಗಳೊಂದಿಗೆ 50 ಬೌಲ್ ಗಳಲ್ಲಿ 107 ರನ್ ಗಳಿಸಿ ಆರ್ಭಟಿಸಿದರು. ಈ ಮೂಲಕ ತಮ್ಮನ್ನು ಪದೆಪದೆ ಆಯ್ಕೆ ಮಾಡದೆ ಇರುತ್ತಿದ್ದ ಆಯ್ಕೆ ಮಂಡಳಿಗೆ, ಟೀಕಿಸುವವರಿಗೆ ಉತ್ತರ ಕೊಡುವ ಕೆಲಸವನ್ನು ಅವಕಾಶ ಸಿಕ್ಕಾಗಲೆಲ್ಲ ಮಾಡುತ್ತಿದ್ದಾರೆ. ನಾಯಕ ಸೂರ್ಯಕುಮಾರ್ ಯಾದವ್ 21, ತಿಲಕ್ ಮರ್ವಾ 33 ರನ್ ಬಿಟ್ಟರೆ ಉಳಿದವರು ಸರಿಯಾಗಿ ಆಡಲಿಲ್ಲ. ಹೀಗಾಗಿ 8 ವಿಕೆಟ್ ನಷ್ಟಕ್ಕೆ 202 ರನ್ ಕಲೆ ಹಾಕಲಾಯಿತು.
ಸೌಥ್ ಆಫ್ರಿಕಾ ಗ್ರಿಲ್ಡ್ ಕೊಟ್ಜೆ 3 ವಿಕೆಟ್ ಕಿತ್ತು ಸಂಭ್ರಮಿಸಿದರು. ಮಾರ್ಕ್ ಜಾನ್ಸನ್, ಮಾರ್ಕ್ಂ, ಪೀಟರ್, ಕ್ರೂಜರ್ ತಲಾ 1 ವಿಕೆಟ್ ಪಡೆದರು. 203 ರನ್ ಗುರಿ ಚೇಸ್ ಮಾಡಿದ ಆಫ್ರಿಕಾ ಪಡೆ ರವಿ ಬಿಷ್ಣೋಯಿ, ವರುಣ್ ಚಕ್ರವರ್ತಿ ಅದ್ಭುತ ಬೌಲಿಂಗ್ ನಿಂದ 141 ರನ್ ಗಳಿಗೆ ಸರ್ವಪತನ ಕಂಡಿತು. ಬಿಷ್ಣೋಯಿ ಹಾಗೂ ಚಕ್ರವರ್ತಿ ತಲಾ 3 ವಿಕೆಟ್ ಪಡೆದು ಸಂಭ್ರಮಿಸಿದರು. ಆವೇಶ್ ಖಾನ್ 2, ಅರ್ಷದೀಪ್ ಸಿಂಗ್ 1 ವಿಕೆಟ್ ಪಡೆದು ಸಾಥ್ ನೀಡಿದರು. ಸಂಜು ಸ್ಯಾಮ್ಸನ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.