ಪ್ರಜಾಸ್ತ್ರ ಸುದ್ದಿ
2026ರ ಐಪಿಎಲ್ ಟೂರ್ನಿಗೆ ಸಂಬಂಧಿಸಿದಂತೆ ಆಟಗಾರರ ವಿನಿಮಯ ಮಾಡಿಕೊಳ್ಳಲು ಗಡುವು ನೀಡಲಾಗಿತ್ತು. ಅದರಂತೆ ಗುಜರಾತ್, ಚೆನ್ನೈ ಫ್ರಾಂಚೈಸಿಗಳು ತಮ್ಮ ನಿರ್ಧಾರ ಪ್ರಕಟಿಸಿವೆ. ರಾಜಸ್ಥಾನ ತಂಡದ ನಾಯಕ, ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಬರೋಬ್ಬರಿ 18 ಕೋಟಿ ರೂಪಾಯಿಗೆ ವಿನಿಮಯ ಒಪ್ಪಂದ ಮಾಡಿಕೊಂಡಿದೆ.
ಇನ್ನು ಸಿಎಸ್ಕೆ ತಂಡದ ಆಲ್ ರೌಂಡರ್ ರವೀಂದ್ರ ಜಡೇಜಾ ಅವರನ್ನು ರಾಜಸ್ಥಾನ 14 ಕೋಟಿ ರೂಪಾಯಿ ವಿನಿಮಯ ಮಾಡಿಕೊಂಡಿದೆ. ಬೌಲರ್ ಸ್ಯಾಮ್ ಕರನ್ ಅವರನ್ನು 2.5 ಕೋಟಿ ಬಿಟ್ಟು ಕೊಡಲಾಗಿದೆ. ಇನ್ನು ಹೈದ್ರಾಬಾದ್ ತಂಡದ ಆಟಗಾರ ಮೊಹಮ್ಮದ್ ಶಮಿ ಅವರನ್ನು 10 ಕೋಟಿ ರೂಪಾಯಿ ಲಖ್ನೋ ಸೂಪರ್ ಜಯಂಟ್ಸ್ ಪಿಕ್ ಮಾಡಿದೆ.
ನಿತೀಶ್ ರಾಣಾ ರಾಜಸ್ಥಾನದಿಂದ ಡೆಲ್ಲಿಗೆ 4.2 ಕೋಟಿಗೆ, ಮಾರ್ಕಂಡ್ ಮುಂಬೈ ತಂಡಕ್ಕೆ 30 ಲಕ್ಷ ರೂಪಾಯಿಗೆ ಮರಳಿದ್ದಾರೆ. ಡೆಕ್ಕನ್ ಚಾರ್ಜಸ್ ನಿಂದ ರಾಜಸ್ಥಾನಕ್ಕೆ ತಂಡಕ್ಕೆ ಫೆರೆರಿಯಾ 1 ಕೋಟಿಗೆ ಮರಳಿದ್ದಾರೆ. ಇನ್ನು ಅರ್ಜುನ್ ತಂಡೂಲ್ಕರ್ ಮುಂಬೈಗೆ ಲಖ್ನೋಗೆ 30 ಲಕ್ಷ ರೂಪಾಯಿಗೆ ಟ್ರೇಡ್ ಆಗಿದ್ದಾರೆ. ಸಂಜು ಸ್ಯಾಮ್ಸನ್ ಹಾಗೂ ಜಡೇಜಾ ಅವರದ್ದು ಐಪಿಎಲ್ ಇತಿಹಾಸದಲ್ಲಿಯೇ ಇದು ದೊಡ್ಡ ಮಟ್ಟದ ವಿನಿಮಯವಾಗಿದೆ.




