ಪ್ರಜಾಸ್ತ್ರ ಸುದ್ದಿ
ನಿರ್ದೇಶಕ ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದ ಸಂಜು ವೆಡ್ಸ್ ಗೀತಾ-2 ಜೂನ್ 6ರಂದು ಮರುಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಜನವರಿ 17ರಂದು ರಿಲೀಸ್ ಆಗಿದ್ದ ಸಿನಿಮಾಗೆ ಕೆಲವೊಂದು ಅಡೆತಡೆಗಳು ಬಂದ ಹಿನ್ನಲೆಯಲ್ಲಿ ಮೂರೇ ದಿನಕ್ಕೆ ಸಿನಿಮಾ ಸ್ಥಗಿತವಾಗಿತ್ತು. ಅಂದು ರಿಲೀಸ್ ಆದ ಸಿನಿಮಾ 2 ಗಂಟೆ 2 ನಿಮಿಷ ಇತ್ತು. ಈಗ 2 ಗಂಟೆ 23 ನಿಮಿಷವಿದೆ ಎಂದು. ನಿರ್ದೇಶಕರಾದ ಎಸ್.ಮಹೇಂದ್ರ, ಎಸ್.ನಾರಾಯಣ ಸೇರಿದಂತೆ 22 ನಿರ್ದೇಶಕರಿಗೆ ಸಿನಿಮಾ ತೋರಿಸಲಾಗಿದೆ. ಜಯಣ್ಣ ಫಿಲ್ಮಸ್ ಸಿನಿಮಾ ಬಿಡುಗಡೆ ಮಾಡುತ್ತಿದೆ. ಜೂನ್ 2ರಂದು ಪ್ರಿರಿಲೀಸ್ ಇವೆಂಟ್ ಮಾಡುತ್ತಿದ್ದೇವೆ ಎಂದು ನಿರ್ದೇಶಕ ನಾಗಶೇಖರ್ ಹೇಳಿದ್ದಾರೆ.
ಸಿನಿಮಾ ಬಿಡುಗಡೆಯಾಗಿ 3 ದಿನವಾಗಿರುವಾಗಲೇ ಸ್ಟೇ ತಂದಿದ್ದರು. ಇದರಿಂದಾಗಿ ಎಲ್ಲ ಥಿಯೇಟರ್ ಗಳಲ್ಲಿ ಸಿನಿಮಾ ನಿಲ್ಲಿಸಲಾಯಿತು. ಸ್ಟೇ ವೆಕೇಟ್ ಮಾಡಿಸಲಾಯಿತು. ಮತ್ತೆ 20 ನಿಮಿಷಗಳ ಪ್ರಮುಖ ದೃಶ್ಯಗಳನ್ನು ಸೇರಿಸಿ ಮರು ಬಿಡುಗಡೆ ಮಾಡುತ್ತಿದ್ದೇವೆ. ಶಿವಣ್ಣ, ಉಪೇಂದ್ರ, ಸುದೀಪ್ ಸೇರಿದಂತೆ ಫಿಲ್ಮ್ ಚೇಂಬರ್ ಅಧ್ಯಕ್ಷರು ಬೆಂಬಲ ನೀಡಿದ್ದಾರೆ ಎಂದು ನಿರ್ಮಾಪಕ ಛಲವಾದಿ ಕುಮಾರ್ ಹೇಳಿದ್ದಾರೆ. ನಟ ಶ್ರೀನಗರ ಕಿಟ್ಟಿ, ನಟಿ ರಕ್ಷಿತಾ ರಾಮ್ ಲೀಡ್ ರೋಲ್ ಮಾಡಿದ್ದಾರೆ. ನಟಿ ರಾಗಿಣಿ ದ್ವಿವೇದಿ ಅತಿಥಿ ಪಾತ್ರದಲ್ಲಿ ಬಂದು ಹೋಗುತ್ತಾರೆ.