ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಡಿಸೆಂಬರ್ 30ರಂದು ವಿಜಯಪುರ ಬಂದ್ ಗೆ ಕರೆ ಕೊಡಲಾಗಿತ್ತು. ಜಿಲ್ಲೆಯಲ್ಲಿ 8 ಶಾಸಕರಲ್ಲಿ 6 ಶಾಸಕರು, ಪರಿಷತ್ ಸದಸ್ಯರು ಕಾಂಗ್ರೆಸ್ಸಿನವರು ಇದ್ದರೂ ಯಾರೊಬ್ಬರೂ ಭಾಗವಹಿಸದೆ ಇರುವುದು ಬೇಸರದ ಸಂಗತಿ ಎಂದು ರಾಷ್ಟ್ರೀಯ ಅಹಿಂದ ಸಂಘಟನೆ ಜಿಲ್ಲಾಧ್ಯಕ್ಷ ಸಂತೋಷ ಹರನಾಳ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಅಹಿಂದ, ದಲಿತ ಸಂಘರ್ಷ ಸಮಿತಿ, ರೈತ ಸಂಘ, ಮಹಿಳಾ ಸಂಘಟನೆ, ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ನಡೆದ ಬಂದ್ ನಲ್ಲಿ ಭಾಗವಹಿಸಿದ ಎಲ್ಲರಿಗೂ ತುಂಬು ಹೃದಯದ ಅಭಿನಂದನೆಗಳು. ಆದರೆ, ನಮ್ಮ ಜಿಲ್ಲೆಯ ಇಬ್ಬರು ಸಚಿವರು, ನಾಲ್ವರು ಶಾಸಕರು ಇದ್ದರೂ ಭಾಗವಹಿಸದೆ ಇರುವುದು ಬೇಸರದ ಸಂಗತಿ. ಚುನಾವಣೆಯಲ್ಲಿ ಅಹಿಂದ ವರ್ಗದ ಮತಬೇಕು. ಆದರೆ, ಅಹಿಂದ ಕಷ್ಟಗಳಿಗೆ ಸ್ಪಂದಿಸಲ್ಲ. ಅಹಿಂದ ಜನಸಂಖ್ಯೆ ಹೆಚ್ಚಿಗೆ ಇದ್ದರೂ ಬೆರೆಳಣಿಕೆಯಷ್ಟು ಇರುವ ಜನರು ಶಾಸಕರಾಗುತ್ತಾರೆ. ಕಾರಣ ಹಣ ಬಲ. ಮುಂಬರುವ ದಿನಗಳಲ್ಲಿ ನಮ್ಮ ಜನರು ಯಾರಿಗೂ ಗುಲಾಮರಾಗದೆ ಯಾವ ಹಣಕ್ಕೂ ಆಸೆ ಪಡದೆ. ಹಿಂದುಳಿದ ಜನರು ಒಟ್ಟಾಗಿ ಇಂತಹ ಶಾಸಕರಿಗೆ ತಕ್ಕ ಪಾಠ ಕಲಿಸಬೇಕು.
ಜೆಡಿಎಸ್ ಏಕೈಕ ದೇವರ ಹಿಪ್ಪರಗಿ ಶಾಸಕರು, ಸಿಂದಗಿ ಶಾಸಕರು ಡಿಸೆಂಬರ್ 22ರಂದು ನಡೆದ ಹೋರಾಟ ಮೆರವಣಿಗೆಯಲ್ಲಿ ಹತ್ತಿರ ಹಾದು ಹೋದರು ಕೂಡ ಕನಿಷ್ಠ ಸೌಜನ್ಯಕ್ಕಾದರೂ ಬಂದು ಭಾಗವಹಿಸಿಲ್ಲ. ಇದೇ ನಮ್ಮ ಮತಕ್ಷೇತ್ರದ ದುರಾದೃಷ್ಟ ಸಂಗತಿ. ಇನ್ನು ಮುಂದೆ ನಮ್ಮ ಮತಕ್ಷೇತ್ರದಲ್ಲಿ ಕೂಡ ಬರತಕ್ಕಂತ ದಿನಗಳಲ್ಲಿ ಯಾವುದೇ ಚುನಾವಣೆ ಬಂದರೂ ನಾವೆಲ್ಲ ಹಿಂದುಳಿದ ಜನ ಒಗ್ಗಟ್ಟಾಗಿ ಸಂಘಟನೆ ಮಾಡಿಸಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.