ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಕಾಂಗ್ರೆಸ್ ನಾಯಕರು ಹಾಗೂ ಗುತ್ತಿಗೆದಾರರು ಆದ ಸಂತೋಷ ಹರನಾಳ ಅವರನ್ನು ರಾಷ್ಟ್ರೀಯ ಅಹಿಂದ ಸಂಘಟನೆಯ ವಿಜಯಪುರ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಣ್ಣ ಎಸ್.ಶಿವಳ್ಳಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೊ.ಬೀರಲಿಂಗೇಶ್ವರ ಪೂಜಾರಿ ನೇಮಕಾತಿ ಕುರಿತು ಆದೇಶ ಪತ್ರ ನೀಡಿದ್ದಾರೆ. ಮುಂದಿನ ಆದೇಶದವರೆಗೂ ವಿಜಯಪುರ ಜಿಲ್ಲಾಧ್ಯಕ್ಷರಾಗಿ, ಅಹಿಂದ ಸಂಘಟನೆಯ ವರ್ಗಗಳ, ಸಮುದಾಯದ, ಜಾತ್ಯಾತೀತ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳ ಪರ ನ್ಯಾಯಯುತ ಸಂಘಟನೆಗೆ ಶ್ರಮಿಸಬೇಕು ಎಂದು ತಿಳಿಸಲಾಗಿದೆ.