Ad imageAd image

‘ಅಣ್ಣಾವ್ರು ಕಾಡು ಉಳಿಸಿ ಅಂದ್ರು.. ಈಗಿನವರು ನಾಶ ಮಾಡಿ ಅಂತವ್ರೆ’

Nagesh Talawar
‘ಅಣ್ಣಾವ್ರು ಕಾಡು ಉಳಿಸಿ ಅಂದ್ರು.. ಈಗಿನವರು ನಾಶ ಮಾಡಿ ಅಂತವ್ರೆ’
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್(pavn kalyan) ಇತ್ತೀಚೆಗೆ ಕರ್ನಾಟಕ್ಕೆ ಭೇಟಿ ನೀಡಿದ್ದರು. ಈ ವೇಳೆ ರಾಷ್ಟ್ರಕವಿ ಕುವೆಂಪು ಅವರ ಪರಿಸರದ ಕುರಿತಾದ ಕವಿತೆಯ ಸಾಲುಗಳನ್ನು ಹೇಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೇ ವೇಳೆ ಅರಣ್ಯ ಸಚಿವ ಈಶ್ವರ ಖಂಡ್ರೆಯವರೊಂದಿಗೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ್ದರು. ಈ ವೇಳೆ ಆಡಿದ ಮಾತು ನಟ ಅಲ್ಲು ಅರ್ಜುನ್ ಕುರಿತಾಗಿ ಎಂದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ವರನಟ ಡಾ.ರಾಜಕುಮಾರ್(rajkumar) ಅವರು ಕಾಡು ಉಳಿಸಿ ಎಂದು ಗಂಧದಗುಡಿ(gandhadagudi) ಎನ್ನುವ ಸಿನಿಮಾ ಮಾಡಿದರು. ಕಳ್ಳ ಬೇಟೆಗಾರರ ವಿರುದ್ಧದ ಹೋರಾಟದ ವೀರನ ಪಾತ್ರ ಮಾಡಿ, ಕಾಡುಗಳನ್ನು ರಕ್ಷಿಸಬೇಕು ಎನ್ನುವ ಸಂದೇಶ ನೀಡಿದರು. ಈಗಿನ ನಾಯಕರು ಕಾಡು ನಾಶ ಮಾಡುವ ವ್ಯಕ್ತಿಯಂತೆ ತೋರಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಇದು ನಟ ಅಲ್ಲು ಅರ್ಜುನ್(allu arjun) ನಟನೆಯ ಪುಷ್ಪ(pushpa) ಚಿತ್ರದ ಕುರಿತು ಹೇಳಿದ ಮಾತು ಎಂದು ಈಗ ಚರ್ಚೆಯಾಗುತ್ತಿದೆ. ಪುಷ್ಪ ಚಿತ್ರದಲ್ಲಿ ನಟ ಅಲ್ಲು ಅರ್ಜುನ್ ರಕ್ತಚಂದ್ರನ ಕಳ್ಳಸಾಗಾಟ ಮಾಡುವ ರೋಲ್ ಮಾಡಿದ್ದಾರೆ. ವಿಲನ್ ಗಳ ಜೊತೆಗಿರುವ ಹೀರೋ ವಿಲನ್ ಪಾತ್ರವದು.

ಕಮರ್ಷಿಲ್ ಆಗಿ ಸಿನಿಮಾ ಹಿಟ್ ಆಯ್ತು. ನಟ, ನಿರ್ದೇಶಕ, ನಿರ್ಮಾಪಕರಿಗೆ ಏನು ಬೇಕಿತ್ತೋ ಅದು ಸಿಕ್ತು. ನಂತರದ ದಿನಗಳಲ್ಲಿ ಇದೇ ರೀತಿ ರಿಯಲ್ ಲೈಫ್ ನಲ್ಲಿ ಮಾಡಲು ಹೋಗಿ ಅನೇಕರು ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆಗಳು ನಡೆದವು. ಹೀಗಾಗಿ ಪವನ್ ಕಲ್ಯಾಣ್ ಹೇಳಿದ್ದು ಸರಿಯಾಗಿದೆ ಎಂದು ಕೆಲವರ ಹೇಳಿದ್ರೆ, ಅವರು ಅಲ್ಲು ಅರ್ಜುನ್ ಒಬ್ಬರೆ ಕುರಿತು ಹೇಳಿಲ್ಲ. ಬದಲಾದ ಈಗಿನ ನಟರ ಸಿನಿಮಾಗಳ ಕುರಿತು ಹೇಳಿದ್ದಾರೆ ಅಂತಾ ಮತ್ತೆ ಕೆಲವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಹೀರೋ ಕೆಟ್ಟದ್ದು ಮಾಡಿದರೂ ಒಳ್ಳೆಯದು ಎನ್ನುವ ಹಂತಕ್ಕೆ ಸಿನಿಮಾ ಜಗತ್ತು ಬಂದು ನಿಂತಿದೆ.

WhatsApp Group Join Now
Telegram Group Join Now
Share This Article