Ad imageAd image

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್ ನಾಗೂರ ಅಮಾನತು

ಕರ್ತವ್ಯಲೋಪ ಎಸಗಿರುವ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎನ್.ಎಚ್ ನಾಗೂರ ಅಮಾನತುಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ

Nagesh Talawar
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್ ನಾಗೂರ ಅಮಾನತು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಕರ್ತವ್ಯಲೋಪ ಎಸಗಿರುವ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎನ್.ಎಚ್ ನಾಗೂರ ಅಮಾನತುಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರ್ಕಾರ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜನ ರಾಮಚಂದ್ರಪ್ಪ ಪ್ರಕಟಣೆ ಹೊರಡಿಸಿದ್ದಾರೆ. 2024-25ನೇ ಸಾಲಿನಲ್ಲಿ ಹೊಸ ಶಾಲೆ ನೋಂದಣಿ ಪ್ರಕ್ರಿಯೆಯಲ್ಲಿ ಉಂಟಾಗಿರುವ ನಿಯಮಬಾಹಿರ ಅನುಮೋದನೆ ಪ್ರಕರಣಗಳ ಬಗ್ಗೆ ಧಾರವಾಡ ವಿಭಾಗ ಅಪರ ಆಯುಕ್ತರು ತಪಾಸಣೆ ವರದಿ ಸಲ್ಲಿಸಿದ್ದಾರೆ.

122 ಅರ್ಜಿಗಳು ಸಲ್ಲಿಕೆಯಾಗಿವೆ. 58 ಅರ್ಜಿಗಳು ಅನುಮೋದನೆಗೊಂಡಿವೆ. 64 ಅರ್ಜಿಗಳು ತಿರಸ್ಕೃತಗೊಂಡಿವೆ. 77 ಅರ್ಜಿಗಳನ್ನು ರಿಕಾಲ್ ಮಾಡಲಾಗಿದೆ. 45 ಅರ್ಜಿಗಳನ್ನು ನಿಯಮಾನುಸಾರ ರಿಕಾಲ್ ಮಾಡಿರುವುದಿಲ್ಲ. ಅಪರ ಆಯುಕ್ತರ ಕಚೇರಿಯ ನಿರ್ದೇಶಕರು, ಸಿಬ್ಬಂದಿ ಎನ್.ಎಚ್ ನಾಗೂರ ಅವರ ಲಿಖಿತ ಹೇಳಿಕೆಯನ್ನು ಪರಿಶೀಲಿಸಿದಾಗ, ಸ್ವೀಕರಿಸಿದ 77 ಅರ್ಜಿಗಳಲ್ಲಿ 45 ಅರ್ಜಿಗಳಲ್ಲಿ ರೋಲ್ ಬ್ಯಾಕ್ ಅವಕಾಶ ನೀಡದೆ, ನೇರವಾಗಿ 24 ಅರ್ಜಿಗಳನ್ನು ತಿರಸ್ಕಾರ ಮಾಡಿದ್ದಾರೆ. ಹೀಗೆ ಹಲವು ವಿಚಾರಗಳಲ್ಲಿ 2024-25ನೇ ಸಾಲಿನ ಹೊಸ ಸಾಲಿಗೆ ನೋಂದಣಿ ಪ್ರಕ್ರಿಯೆಯಲ್ಲಿ ನಿಯಮಬಾಹಿರವಾಗಿ ಕೃತ್ಯ ಎಸಗಿ ಇಲಾಖೆಗೆ ಮುಜುಗರ ಉಂಟು ಮಾಡಿದ್ದು, ಎನ್.ಎಚ್ ನಾಗೂರ ಅವರನ್ನು ಅಮನತುಗೊಳಿಸಲು ಹಾಗೂ ಉಮಾದೇವಿ ಸೊನ್ನದ ವಿರುದ್ಧ ಶಿಸ್ತುಕ್ರಮ ಜರಗಿಸುವಂತೆ ಕೋರಲಾಗಿದೆ.

WhatsApp Group Join Now
Telegram Group Join Now
Share This Article