ಪ್ರಜಾಸ್ತ್ರ ಸುದ್ದಿ
ದಾವಣಗೆರೆ(Davanagere): ಸಿಗ್ನಲ್ ಜಂಪ್ ಮಾಡಿ ಗೂಡ್ಸ್ ವಾಹನಕ್ಕೆ ಸ್ಕೂಟಿಯೊಂದು ಹಿಂಬದಿಯಲ್ಲಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದು, ಮತ್ತೊಬ್ಬ ಗಾಯಗೊಂಡಿದ್ದಾನೆ. ಜಿಲ್ಲಾಧಿಕಾರಿ ಕಚೇರಿ ಬಳಿಯ ಪಿ.ಬಿ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಹರಿಹರದ ನಿವಾಸಿ ಮೈಕಲ್ ಕುಮಾರ್(22) ಮೃತ ದುರ್ದೈವಿ. ಹಿಂಬದಿ ಸವಾರ ಆಂಥೋನಿ ಗಾಯಗೊಂಡಿದ್ದಾರೆ.
ಹರಿಹರದಿಂದ ದಾವಣೆಗೆರೆಗೆ ಸ್ಕೂಟಿಯಲ್ಲಿ ಬರುತ್ತಿದ್ದರು. ಡಿಸಿ ಕಚೇರಿ ಹತ್ತಿರ ಬರುತ್ತಿದ್ದಾಗ ಸಿಗ್ನಲ್ ಜಂಪ್ ಮಾಡಿಕೊಂಡು ಹೊರಟಾಗ ಗೂಡ್ಸ್ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ. ದಾವಣಗೆರೆ ಉತ್ತರ ವಲಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.