ಪ್ರಜಾಸ್ತ್ರ ಸುದ್ದಿ
ಧರ್ಮಸ್ಥಳ(Dharmasthala): ಇಲ್ಲಿ ಅಪರಾಧಿ ಕೃತ್ಯಗಳು ನಡೆದಿವೆ ಎಂದು ಹೇಳಲಾಗುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರ ತೋರಿಸಿದ 13ನೇ ಸ್ಥಳದಲ್ಲಿ ಮಂಗಳವಾರ ಶೋಧ ಕಾರ್ಯ ನಡೆಸಲಾಗುತ್ತಿದೆ. ಯಂತ್ರದ ಮೂಲಕ ನೆಲ ಅಗೆಯುವ ಮೂಲಕ ಶವಗಳ ಇರುವ ಗುರುತು ಏನಾದರೂ ಸಿಗುತ್ತಾ ಎಂದು ಹುಡುಕಲಾಗುತ್ತಿದೆ.
ಎಸ್ಐಟಿ ತಂಡ ಮೃತದೇಹದ ಅವಶೇಷಗಳು ಏನಾದರೂ ನೆಲದಡಿಯಲ್ಲಿ ಇದ್ಯಾ ಎಂದು ತಿಳಿದುಕೊಳ್ಳಲು ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ ಸಾಧನವನ್ನು ಬಳಸಲಾಗಿದೆ. ಸಾಕ್ಷಿ ದೂರುದಾರ ತೋರಿಸಿದ ಜಾಗದಲ್ಲಿ ಎಲ್ಲ ರೀತಿಯಿಂದ ಶೋಧ ಕಾರ್ಯ ನಡೆಯುತ್ತಿದೆ.